ಮಡಿಕೇರಿ, ಡಿ. 19: ಇಲ್ಲಿನ ಸಂತ ಮೈಕಲರ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನವು ತಾ. 21 ರಂದು ಶಾಲಾ ಆವರಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು; ವಿದ್ಯಾಸಂಸ್ಥೆಯ ಪ್ರಮುಖ ರೆ.ಫಾ. ನವೀನ್ ಕುಮಾರ್, ರೆ.ಫಾ. ಆಲ್ಫ್ರೆಡ್ ಜಾನ್ ಮೆಂಡೋನ್‍ಕಾ ಹಾಗೂ ಮುಖ್ಯ ಅತಿಥಿಗಳಾಗಿ ಬಿಇಒ ಗಾಯತ್ರಿ, ಡಿವೈಎಸ್‍ಪಿ ದಿನೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭವು 2.30ಕ್ಕೆ ನಡೆಯಲಿದ್ದು; ಸಂತ ಅನ್ನಮ್ಮ ವಿದ್ಯಾಸಂಸ್ಥೆ ವೀರಾಜಪೇಟೆಯ ರೆ.ಫಾ. ಮದಲೈ ಮುತ್ತು, ಸಂತ ಮೇರಿ ವಿದ್ಯಾಸಂಸ್ಥೆ ಸುಂಟಿಕೊಪ್ಪದ ರೆ.ಫಾ. ಎಡ್‍ವರ್ಡ್ ವಿಲಿಯಮ್ ಸಾಲ್ಡಾನ ಹಾಗೂ ಮುಖ್ಯ ಅತಿಥಿಗಳಾಗಿ ಡಿಡಿಪಿಐ ಮಚ್ಚಾಡೋ, ಡಿಡಿಪಿಯು ಭವಾನಿ, ಏಷಿಯನ್ ಗೇಮ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕ್ಲಿಂಟನ್ ಡಿ. ಕ್ರೂಜ್ ಪಾಲ್ಗೊಳ್ಳಲಿದ್ದಾರೆ.