ಗುಡ್ಡೆಹೊಸೂರು, ಡಿ. 19: ಇಲ್ಲಿಗೆ ಸಮೀಪದ ಬಸವನಹಳ್ಳಿ ಶಾಲೆಯ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ನಡೆದ ಕ್ರೀಡಾಕೂಟವನ್ನು ಪ್ರೋಕಬಡ್ಡಿ ಆಟಗಾರ ನವೀನ್ ಉಧ್ಘಾಟಿಸಿದರು. ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕೆÀ್ಷ ಕೆ.ಎಸ್.ಭಾರತಿ ಮತ್ತು ಪಿ.ಡಿ.ಓ ಶ್ಯಾಂ ಹಾಜರಿದ್ದರು. ತಾ.ಪಂ.ಸದಸ್ಯೆ ಪುಷ್ಪ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಗ್ರಾಮದ ಪ್ರಮುಖರಾದ ಬಿ.ಎಸ್.ಧನಪಾಲ್, ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅಧಿಕಾರಿ ಆಯಿಷಾ ಹಾಜರಿದ್ದರು. ಗ್ರಾ.ಪಂ. ಸದಸ್ಯೆ ಡಾಟಿ, ಪುಷ್ಪ, ನಿವೃತ ಶಿಕ್ಷಕಿ ಕೆ.ಕೆ. ಶೇಷಮ್ಮ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚಂದ್ರ, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಬಿ.ಕೆ.ಮೋಹನ್, ಉದ್ಯಮಿ ಕುಡೆಕ್ಕಲ್ ನಿತ್ಯಾನಂದ ಮತ್ತು ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು. ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.