ಮಡಿಕೇರಿ ಡಿ. 19 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಸೂಚನೆಯ ಮೇರೆಗೆ ಮಡಿಕೇರಿ ಬ್ಲಾಕ್ ಅಧ್ಯಕ್ಷರನ್ನು ಈ ಹಿಂದಿನಂತೆ ಮುಂದುವರೆಸಲಾಗಿದ್ದು, ವೀರಾಜಪೇಟೆ ಸೇರಿದಂತೆ ಐದು ಬ್ಲಾಕ್ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ. ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಮಡಿಕೇರಿ ಬ್ಲಾಕ್ ಅಧ್ಯಕ್ಷರಾಗಿ ಅಪ್ರು ರವೀಂದ್ರ ಅವರನ್ನು ಮುಂದುವರೆಸ ಲಾಗಿದ್ದು, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾಗಿ ಕೋದಂಡ ಸಂಪತ್ ಸೋಮಣ್ಣ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷರಾಗಿ ಬಿ.ಬಿ. ಸತೀಶ್, ಕುಶಾಲನಗರ ಬ್ಲಾಕ್ ಅಧ್ಯಕ್ಷರಾಗಿ ಬಿ.ಎಸ್. ಅನಂತ್ ಕುಮಾರ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರನ್ನಾಗಿ ಕೆ. ಎ. ಇಸ್ಮಾಯಿಲ್ ಅವರನ್ನು ನೇಮಿಸಲಾಗಿದೆ.
ಮಡಿಕೇರಿ ನಗರವನ್ನು ಮಡಿಕೇರಿ ಬ್ಲಾಕ್ನಿಂದ ಪ್ರತ್ಯೇಕಗೊಳಿಸಿ ಕೆ.ಯು. ಅಬ್ದುಲ್ ರಜಾಕ್ ಅವರಿಗೆ ಮಡಿಕೇರಿ ನಗರ ಕಾಂಗ್ರೆಸ್ನ ಜವಾಬ್ದಾರಿಯನ್ನು ನೀಡಲಾಗಿದೆ. ಸುರೇಶ್ ಪೆರುಮುಂಡ ಅವರನ್ನು ನಾಪೋಕ್ಲು ಬ್ಲಾಕ್ ಉಪಾಧ್ಯಕ್ಷರಾಗಿ ಹಾಗೂ ಸಂಪಾಜೆ ಮತ್ತು ಭಾಗಮಂಡಲ ಹೋಬಳಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಜವಾಬ್ದಾರಿಯನ್ನು ನೀಡಲಾಗಿದೆ.
ಪದಾಧಿಕಾರಿಗಳ ಆಯ್ಕೆ -ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ರಾಜಮ್ಮ ರುದ್ರಯ್ಯ, ಹಂಸ ಕೊಟ್ಟಮುಡಿ, ಎಂ.ಎಸ್. ಪೂವಯ್ಯ, ಪೆರುಮುಂಡ ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ಎಂ. ಎನ್. ನಂದಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬೇಕಲ್ ರಮಾನಾಥ್, ಎಸ್. ಎಂ. ಚಂಗಪ್ಪ, ವಿ. ಪಿ. ಸುರೇಶ್, ಅಬ್ದುಲ್ ಸಲಾಂ ಅವರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಗಳಾಗಿ ಟಾಟು ಮೊಣ್ಣಪ್ಪ, ರಶೀದ್ ಮುತ್ತು, ಸಜಿ, ಅಬ್ದುಲ್ ಖಾದರ್ನ್ನು ನೇಮಿಸಲಾಗಿದೆ.
ಕಾರ್ಯಕಾರಿ ಸದಸ್ಯರುಗಳಾಗಿ ಕುಸುಮ ಜೋಯಪ್ಪ, ಗೀತಾ ಧರ್ಮಪ್ಪ, ಕಾವೇರಮ್ಮ ಸೋಮಣ್ಣ, ಡಿ.ಜೆ. ರಾಜೇಶ್,ಶÀಫಿ ಯಡಪಾಲ, ಕೆ.ಹೆಚ್.ಮಹಮ್ಮದ್ ರಫಿ, ಅಜೀಜ್ ನಾಪೋಕ್ಲು, ಪಾಪು ಸಣ್ಣಯ್ಯ, ಸೌಕತ್ ಆಲಿ, ಟಿ.ಈ.ಸುರೇಶ್, ನವೀನ್ ಹುದಿಕೇರಿ, ಕಾಡ್ಯಮಾಡ ಬೋಪಣ್ಣ, ಧರ್ಮಜ ಉತ್ತಪ್ಪ, ರಮೇಶ್ ಭಾಗಮಂಡಲ, ವಿ.ಪಿ. ಶಶಿಧರ್, ಕೆ.ಎಂ.ಲೋಕೇಶ್, ವೀರೇಂದ್ರ, ಸುನಿಲ್ ಪತ್ರಾವೋ, ಕುಮುದ ಧರ್ಮಪ್ಪ, ಕೆ.ಸಿ.ಲಕ್ಷ್ಮಿ, ಮಂಜುಳಾ ಸೋಮವಾರಪೇಟೆ, ಶ್ರೀಜ ಅಚ್ಚುತ್ತನ್, ಕೆ.ಕೆ. ಸುನೀತ, ಲೀಲಾವತಿ ಅವರನ್ನು ನೇಮಿಸಲಾಗಿದೆ.
ವಿಶೇಷ ಆಹ್ವಾನಿತರು- ಕೊಡಗು ಜಿಲ್ಲಾ ಕಾಂಗ್ರೆಸ್ನ ವಿಶೇಷ ಆಹ್ವಾನಿತರಾಗಿ ಟಿ. ಜಾನ್, ಎಂ. ಬಿ. ಶಿವು ಮಾದಪ್ಪ, ಉಸ್ಮಾನ್ ಹಾಜಿ, ಪಿ.ಕೆ. ಪೊನ್ನಪ್ಪ, ಅಬ್ದುಲ್ ರೆಹಮಾನ್, ಟಿ.ಎಂ. ಅಯ್ಯಪ್ಪ, ಬಿ.ಎನ್. ಪ್ರಕಾಶ್, ಎಂ.ಎಸ್. ವೆಂಕಟೇಶ್, ಪುಟ್ಟ ಲಕ್ಷ್ಮೀ, ವಿನಯ, ಅರವಿಂದ್ ಕುಟ್ಟಪ್ಪ, ಮನು ಮೇದಪ್ಪ, ಪದ್ಮಿನಿ ತಿಮ್ಮಯ್ಯ, ಯು.ಎಂ. ಮುದ್ದಯ್ಯ, ಜಿ.ಎಂ. ಕಾಂತರಾಜು, ಎಂ.ಎಂ. ಸುರೇಶ್, ದೇವಲಿಂಗಯ್ಯ, ಗಣೇಶ್ ಮುದಲಿಯಾರ್, ಎಂ.ಎ. ಉಸ್ಮಾನ್, ಎಂ.ಇ.ಹನೀಫ್, ಕೆ.ಎ. ಮೊಣ್ಣಪ್ಪ, ಜುಲೇಕಾಬಿ, ಪ್ರಕಾಶ್ ಆಚಾರ್ಯ, ಎಸ್.ಕೆ. ವೀರಪ್ಪ, ಹೆಚ್.ಸಿ. ನಾಗೇಶ್, ಕೆ.ಎ. ಆದಂ, ಕೊಲ್ಯದ ಗಿರೀಶ್ ಅವರನ್ನು ಆಯ್ಕೆಮಾಡಲಾಗಿದೆ.