ನಾಪೆÇೀಕ್ಲು, ಡಿ. 19: ತಾ. 21ರ ರಂದು ಕುಂಜಿಲ ಊರ ಅಂಬಲದಲ್ಲಿ ಉಚಿತ ಪಶು ಆರೋಗ್ಯ ಮತ್ತು ಬಂಜೆರಾಸುಗಳ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವನ್ನು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಕಕ್ಕಬ್ಬೆ–ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ವಹಿಸಲಿರುವರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕುಂಜಿಲ ಭಗವತಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೋಟೇರ ಸುರೇಶ್ ಚಂಗಪ್ಪ, ಕಕ್ಕಬ್ಬೆ ವಿ.ಎಸ್.ಎಸ್.ಎನ್ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಮಡಿಕೇರಿ ಕಾವೇರಿ ಕೋಳಿ ಸಾಕಾಣೆ ಸಂಘದ ನಿರ್ದೇಶಕ ಕಲ್ಯಾಟಂಡ ಸುದಾ ಗಣಪತಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ|| ಎ.ಬಿ.ತಮ್ಮಯ್ಯ ಭಾಗವಹಿಸಲಿರುವರು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.