ಪೊನ್ನಂಪೇಟೆ, ಡಿ. 19: ಹಾತೂರು ಪ್ರೌಡಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ತಾ. 20 ರಂದು (ಇಂದು) ನಡೆಯಲಿದೆ. ಕ್ರೀಡೋತ್ಸವ ಸಮಾರಂಭ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಕ್ರೀಡೋತ್ಸವದ ಉದ್ಘಾಟನೆಯನ್ನು ಹಾತೂರು ಗ್ರಾ.ಪಂ. ಸದಸ್ಯೆ ಕೊಕ್ಕಂಡ ರೂಪ ಭೀಮಯ್ಯ ನೆರವೇರಿಸಲಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪಿ.ಎಸ್. ಕುಮಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾತೂರು ಗ್ರಾ.ಪಂ. ಅಧ್ಯಕ್ಷೆ ಬಿ.ಎನ್. ಜಯಂತಿ ಭಾಗವಹಿಸಲಿದ್ದು, ಕ್ರೀಡಾ ಧ್ವಜಾರೋಹಣವನ್ನು ಹಾತೂರು ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಹೆಚ್.ಎಂ. ಗೋಪಾಲಕೃಷ್ಣ ನೆರವೇರಿಸಲಿದ್ದಾರೆ. ಈ ಸಂದರ್ಭ ಪಥ ಸಂಚಲನ ಹಾಗೂ ಮೇಲಾಟಗಳು ನಡೆಯಲಿವೆ.
ಸಮಾರೋಪ ಸಮಾರಂಭ ಮದ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಹಾತೂರು ಸೆಕೆಂಡರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮುಕ್ಕಾಟಿರ ಎಂ. ಸುಬ್ರಮಣಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ತಾ.ಪಂ. ಸದಸ್ಯ ಹೆಚ್.ಎಂ. ಪೂವಯ್ಯ, ಮಡಿಕೇರಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ದಾನಿಗಳಾದ ಗುಮ್ಮಟ್ಟೀರ ಕೆ. ಗಣಪತಿ, ಶ್ರೀ ವನ ಭದ್ರಕಾಳಿ ದೇವಸ್ಥಾನ ಅಬಿವೃದ್ಧಿ ಸಮಿತಿ ಅಧ್ಯಕ್ಷ ಕೊಕ್ಕಂಡ ಡಿ. ಗಣಪತಿ ಹಾತೂರು ಗ್ರಾ.ಪಂ. ಸದಸ್ಯ ಹಂಚಿಮನೆ ಡಿ. ಶ್ರೀನಿವಾಸ್ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.