ವೀರಾಜಪೇಟೆ, ಡಿ. 18: ಕ್ರೀಡೆಗಳು ಜನಪ್ರಿಯವಾಗಲು ಸಂಘ ಸಂಸ್ಥೆಗಳ ಸೂಕ್ತ ಆಯೋಜನೆ ಮತ್ತು ಯುವ ಮನಸ್ಸುಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ವಕೀಲ ಬಿ.ಆರ್. ರತ್ನಾಕರ್ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.

ನವಜ್ಯೋತಿ ಯುವಕ ಸಂಘ ವೀರಾಜಪೇಟೆ ಇವರ 30 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 4ನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಟೈಗರ್ ಫೈಟ್ ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ನಗರದಲ್ಲಿ ಸುಸಜ್ಜಿತವಾದ ಮೈದಾನಗಳು ಇಲ್ಲಾ. ಕ್ರೀಡೆಗಳನ್ನು ಜೀವಂತವಾಗಿರಿಸಲು ಕ್ರೀಡಾಂಗ ಣಗಳು ನಗರಕ್ಕೆ ಅತ್ಯವಶ್ಯಕವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಮಾತನಾಡಿ, ಕಾರ್ಮಿಕ ಮತ್ತು ಮಧ್ಯಮ ಜನಾಂಗದ ಸದಸ್ಯರು ಈ ಸಂಘದಲ್ಲಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಕ್ರೀಡೆಗಳಿಗೆ ಸಮಾನವಾಗಿ ಒತ್ತು ನೀಡಿ ನಗರದಲ್ಲಿ ಮುಂಚೂಣಿಯಲ್ಲಿರುವ ಸಂಘವೆಂದು ಖ್ಯಾತಿಗೆ ಭಾಜನವಾಗಿದೆ. ಅಲ್ಲದೆ ಸಂಘವು ಸಾಮಾಜಕ್ಕೆ ನೀಡಿರುವ ಕೊಡುಗೆಗಳು ಜನಮನ್ನಣೆಗೆ ಪಾತ್ರವಾಗಿ ಇಂದು 30 ವರ್ಷಗಳನ್ನು ಪೂರೈಸಿದೆ ಸಂಘದ ಸೇವೆಗಳು ಮತ್ತಷ್ಟು ಸಮಾಜಕ್ಕೆ ದೊರಕುವಂತಾಗಲಿ ಎಂದರು. ಉದ್ಯಮಿ ಬಿ.ವಿ. ಹೇಮಂತ್, ಕಟ್ಟೆಮಾಡು ಕಾಫಿ ಬೆಳೆಗಾರರಾದ ನಂದೇಟಿರ ಡಾಟಿ ಭೀಮಯ್ಯ, ನಗರ ಭಾ.ಜ.ಪ. ಅಧ್ಯಕ್ಷ ಅನಿಲ್ ಮಂದಣ್ಣ, ಕಾಫಿ ಬೆಳೆಗಾರ ಮರ್ವಿನ್ ಲೊಬೊ, ಕ.ರಾ.ವೇ. ನಗರ ಘಟಕದ ಉಪಧ್ಯಾಕ್ಷ ಬಿಷನ್ ವಾಜ್ ಮತ್ತು ಸಂಘದ ಅಧ್ಯಕ್ಷ ಎನ್. ರವಿ ಉಪಸ್ಥಿತರಿದ್ದರು.

ಎರಡು ದಿನಗಳು ನಡೆದ ಕಾಲ್ಚೆಂಡು ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು 24 ತಂಡಗಳು ಭಾಗವಹಿ ಸಿದ್ದವು. ಅಂತಿಮ ಪಂದ್ಯಾಟವು ಸಿ.ಸಿ.ಬಿ. ವೀರಾಜಪೇಟೆ ಮತ್ತು ಬ್ರದರ್ಸ್ ಎಫ್.ಸಿ. ಸುಂಟಿಕೊಪ್ಪ ಗದ್ದೆಹಳ್ಳ ತಂಡಗಳ ನಡುವೆ ನಡೆದು 2-0 ಗೊಲುಗಳಿಂದ ಬ್ರದರ್ಸ್ ಎಫ್.ಸಿ. ಸುಂಟಿಕೊಪ್ಪ ಗದ್ದೆಹಳ್ಳ ತಂಡವು ಜಯಶಾಲಿಯಾಯಿತು. ವಿಜೇತ ತಂಡಕ್ಕೆ ಹತ್ತು ಸಾವಿರ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಪರಾಜಿತಗೊಂಡ ತಂಡಕ್ಕೆ ಏಳು ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು. ಪಂದ್ಯಾಟದಲ್ಲಿ ಉತ್ತಮ ಗೊಲ್ ಬಶೀರ್ ಬ್ರಿಟೀಷ್ ಬುಲ್ಲೇಟ್, ಉತ್ತಮ ಆಟಗಾರ ಇರ್ಷದ್ ಕುಟ್ಟಿ ಬ್ರದರ್ಸ್ ಎಫ್.ಸಿ., ಉತ್ತಮ ಗೋಲಿ ಫಾಯಜ್, ಭರವಸೆಯ ಆಟಗಾರ ಮಣಿಕಂಠ ಭಗವತಿ ಎಫ್.ಸಿ. ಹಾಲುಗುಂದ ವೈಯುಕ್ತಿ ಪರಿತೋಷಕಗಳನ್ನು ಸಂಘದ ವತಿಯಿಂದ ಪಡೆದುಕೊಂಡರು.