ನಾಪೆÉÇೀಕ್ಲು, ಡಿ. 18: ಕಕ್ಕಬೆ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ತಾ. 25 ರಂದು ಕಕ್ಕಬೆ ಹೊಳೆಯಲ್ಲಿ ಅಂತರ ರಾಜ್ಯಮಟ್ಟದ ಈಜು ಸ್ಪರ್ಧೆ ನಡೆಯಲಿದೆ ಎಂದು ಕ್ಲಬ್‍ನ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಹೇಳಿದರು.
ಈ ಬಗ್ಗೆ ನಾಪೆÉÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದರು. ಸ್ವರ್ಧೆಯನ್ನು ಮೂರು ಹಂತದಲ್ಲಿ ಆಯೋಜಿಸಲಾಗಿದ್ದು, 9-12 ವರ್ಷದವರಿಗೆ 30 ಮೀಟರ್. 12-22 ವರ್ಷದವರಿಗೆ 100 ಮೀಟರ್ ಮತ್ತು 22-50 ವರ್ಷದವರಿಗೆ 1500 ಮೀಟರ್ ದೂರದ ಈಜು ಸ್ವರ್ಧೆಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ಮಹಿಳೆಯರು ಪಾಲ್ಗೊಳ್ಳಲು ಅವಕಾಶವಿದೆ ಎಂದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈಜುಗಾರಿಕೆಯ ಬಗ್ಗೆ ಒಲವು ಮೂಡಿಸಲು ಹಾಗೂ ಗ್ರಾಮೀಣ ಪ್ರದೇಶದ ಈಜುಗಾರರಿಗೆ ವೇದಿಕೆ ಕಲ್ಪಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭ ಸ್ವಯಂ ರಕ್ಷಣೆ ಮತ್ತು ಅಪಾಯದಲ್ಲಿದ್ದವರನ್ನು ರಕ್ಷಿಸಲು ಈಜು ಸಹಕಾರಿಯಾಗಲಿದೆ ಎಂದರು.
ಕ್ಲಬ್ ಸದಸ್ಯ ಅಪ್ಪಾರಂಡ ಸಾಗರ್ ಗಣಪತಿ ಮಾತನಾಡಿ, ಮಡಿಕೇರಿ ಮತ್ತು ಗೋಣಿಕೊಪ್ಪಲಿನಲ್ಲಿ ಮಾತ್ರ ಈಜು ಕೊಳಗಳಿವೆ. ಗ್ರಾಮೀಣ ಮಕ್ಕಳು ಈಜು ಕಲಿಯಲು, ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅವರಿಗೆ ಉತ್ತೇಜನ ನೀಡಲು ಮತ್ತು ಅವಕಾಶ ಕಲ್ಪಿಸಲು ಈ ಸ್ಪರ್ಧೆಯನ್ನು ಕೊಡಗಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಾದಂಡ ಉಮೇಶ್ ಬಿದ್ದಪ್ಪ ಇದ್ದರು.