ಮಡಿಕೇರಿ, ಡಿ. 18: ಕೊಡವ ಸಮಾಜ, ಮಡಿಕೇರಿ ಇದರ ವತಿಯಿಂದ ತಾ.22ರಂದು ಪುತ್ತರಿ ಊರೋರ್ಮೆ ಬೆಳ್ಳಿಗೆ 10.30 ಗಂಟೆಗೆ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಸಮಾಜದ ಉಪಾಧ್ಯಕ್ಷ ಚೋವಂಡ ಡಿ. ಕಾಳಪ್ಪ ಅಧ್ಯಕ್ಷತೆ ವಹಿಸಲಿದ್ದು, ಡಾ.ಮೂಡೆರ ಅನಿಲ್ ಚಂಗಪ್ಪ, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಹೆಚ್ಚಿನ ಅಂಕಗಳಿಸಿ ಪಾಸಾದ ಬಾಂಧವರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ಕೊಡುವುದರೊಂದಿಗೆ ಇತರ ಕಾರ್ಯಕ್ರಮಗಳು ನಡೆಯಲಿದೆ. ಅಪರಾಹ್ನ 2.30 ಗಂಟೆಗೆ ಸಾಂಪ್ರದಾಯಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್, ವಾಲಗ ಸಹಿತಕೋಲ್ ಮಂದಿಗೆ ಮೆರವಣಿಗೆಯಲ್ಲಿ ತೆರಳಿ ಕೋಲಾಟ್, ಬೊಳಕಾಟ್, ಉಮ್ಮತಾಟ್ ಇಂತಹ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಗೌರವ ಕಾರ್ಯದರ್ಶಿ ಅರೆಯಡ ಪಿ.ರಮೇಶ್ ತಿಳಿಸಿದ್ದಾರೆ.