ಮಡಿಕೇರಿ, ಡಿ. 18: ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಛದ್ಮವೇಶ ಸ್ಪರ್ಧೆಯಲ್ಲಿ ಪರಿಚನ ಜನ್ಯ, ಸಿರಕಜೆ ತಿಲಕ್, ಬಿದ್ರುಪಣೆ ಚಿರಾಗ್ ಅಯ್ಯಪ್ಪ ಅವರುಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು. ಚಿತ್ರಕಲೆಯಲ್ಲಿ ನಾಡೋಡಿ ಕುಸ್ಮಿತ್ (ಪ್ರ), ಕಾನಡ್ಕ ದರ್ಶಿನಿ ಹಾಗೂ ಮೊಂಟಡ್ಕ ಶ್ರೀಯಾಕಿರಣ್ (ದ್ವಿ), ಮಂದ್ರಿರ ಕಾವೇರಿ ಮನೋಜ್ (ತೃ) ಬಹುಮಾನ ಪಡೆದರೆ, ಸಾಮಾನ ಜ್ಞಾನ ಪರೀಕ್ಷೆಯಲ್ಲಿ ಕೂರನ ಹೃತ್ಪೂರ್ವಕ್ (ಪ್ರ), ಕರಂದ್ಲಾಜೆ ಶೃಂಗಾ ಆನಂದ್ (ದ್ವಿ), ಕೂಡಕಂಡಿ ಎ. ಪೂರ್ವಿಕ್ (ತೃ) ಬಹುಮಾನ ಪಡೆದುಕೊಂಡರು.
ಭಾಷಣ ಸ್ಪರ್ಧೆಯಲ್ಲಿ ಕೇಡನ ಪ್ರಗತಿ (ಪ್ರ), ತಳೂರು ವಿಕ್ರಂ ಕರುಂಬಯ್ಯ (ದ್ವಿ), ಸುಳ್ಯಕೋಡಿ ವಿ. ಹರ್ಷಿತಾ (ತೃ) ಬಹುಮಾನ ಪಡೆದರೆ, ಸ್ಪರ್ಧೆಗೆ ಮಕ್ಕಳೊಂದಿಗೆ ಬಂದಿದ್ದ ಪೋಷಕರಿಗಾಗಿ ಏರ್ಪಡಿಸಿದ್ದ ಸೋಬಾನೆ ಹಾಡು ಸ್ಪರ್ಧೆಯಲ್ಲಿ ಕಾಳೇರಮ್ಮನ ರಶಿ ಅಶೋಕ್ (ಪ್ರ), ಕುದುಪಜೆ ಮಹಾಲಕ್ಷ್ಮಿ (ದ್ವಿ), ನಡುಗಲ್ಲು ಜಾನ್ಸಿ ರೋಹಿತ್ ಹಾಗೂ ಕೋಳಿಬೈಲು ಗಂಗಮ್ಮ (ತೃ) ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ತಳೂರು ಕೆ. ದಿನೇಶ್‍ಕುಮಾರ್ ಸಂಘದ ವರದಿ ವಾಚಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.