ಮಡಿಕೇರಿ, ಡಿ. 18: ಅಖಿಲ ಕೊಡಗು ಪಣಿಕ ಸಮಾಜದ 5ನೇ ವರ್ಷದ ವಾರ್ಷಿಕೋತ್ಸವ ತಾ. 22ರಂದು ಕಾವಾಡಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಪಿ.ಜಿ. ದಿನೇಶ್ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ, ಆಟೋಟ ಸ್ಪರ್ಧೆ, ಬಹುಮಾನ ವಿತರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಾಜದ ಗೌರವ ಕಾರ್ಯದರ್ಶಿ ಪೊನ್ನಜ್ಜೀರ ಕಿಶು ಭರತ್ ತಿಳಿಸಿದ್ದಾರೆ.