ಸೋಮವಾರಪೇಟೆ,ಡಿ.18: ಕುಶಾಲನಗರ, ಸೋಮವಾರಪೇಟೆ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಐಪಿಡಿಎಸ್ ಯೋಜನೆ ಕಾಮಗಾರಿಯಡಿ ವಾಹಕ ಬದಲಾವಣೆ ಕಾರ್ಯ ನಡೆಯಲಿರುವುದರಿಂದ ಡಿ. 20ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಧನಂಜಯ ತಿಳಿಸಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಚೌಡ್ಲು, ಹಾನಗಲ್ಲು, ದೊಡ್ಡಮಳ್ತೆ, ಐಗೂರು, ಅಬ್ಬೂರುಕಟ್ಟೆ, ಶಾಂತಳ್ಳಿ, ಕಿರಗಂದೂರು, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಇರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.