ನಾಪೆÇೀಕ್ಲು, ಡಿ. 18: ಕೊಡವರು ಪುಟ್ಟ ಸಮುದಾಯಕ್ಕೆ ಸೇರಿದವ ರಾದರೂ, ಸೇನೆ ಮತ್ತು ರಕ್ಷಣೆಯಲ್ಲಿ ಅವರ ಕೊಡುಗೆ ದೇಶಕ್ಕೆ ಅಪಾರ ವಾಗಿದೆ ಎಂದು ನಿವೃತ್ತ ಕರ್ನಲ್ ಅನಿಲ್ ಭಟ್ ಅಭಿಪ್ರಾಯಪಟ್ಟರು.ಸಮೀಪದ ಕೊಳಕೇರಿ ಅಪ್ಪಚ್ಚಿರ ರೆಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್‍ನಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಕೋವಿ ಹಬ್ಬ(ತೋಕ್ ನಮ್ಮೆ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ದೇವಟಿ ಪರಂಬುನಲ್ಲಿ ಟಿಪ್ಪು ಕೊಡವರ ಹತ್ಯಾಕಾಂಡ ನಡೆಸಿದ. ಈ ಬಗ್ಗೆ ಸಿಎನ್ ಸಿ ಪ್ರತಿಭಟನೆ ನಡೆಸಿ ಸ್ಮಾರಕ ಮಾಡಿದ್ದು ಸರಿಯಾಗಿದೆ. ಇದೇ ಈತಿ ತಮಿಳುನಾಡುವಿನ ಅಯ್ಯರ್ ಗಳು, ಕೇರಳದ ಕ್ರಿಶ್ಷಿಯನ್ನರನ್ನೂ ಟಿಪ್ಪು ಹತ್ಯೆ ಮಾಡಿದ್ದಾನೆ ಎಂದರು.ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದ ಬಳಿಕ ಕೊಡಗಿನ ಇಬ್ಬರು ಸೇನಾನಿ ಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಹಾಗೂ ಜನರಲ್ ತಿಮ್ಮಯ್ಯ (ಮೊದಲ ಪುಟದಿಂದ) ಇವರುಗಳ ಅಮೂಲ್ಯ ಸಲಹೆಗಳನ್ನು ಅಂದಿನ ಕೇಂದ್ರ ಸರಕಾರೀ ಪ್ರಮುಖರು ನಿರ್ಲಕ್ಷ್ಯ ಮಾಡಿದರು. ಇದರಿಂದಾಗಿ ದೇಶದ ಗಡಿ ಸಮಸ್ಯೆಗಳು ಈಗಲೂ ಪರಿಹಾರಗೊಳ್ಳದೆ ಭಾರತಕ್ಕೆ ಸಮಸ್ಯೆಯುಂಟಾಗಿದೆ ಎಂದು ಅವರು ವಿವರಿಸಿದರು. ಸಿಎನ್‍ಸಿ ಕೊಡಗು ರಾಜ್ಯದ ಬೇಡಿಕೆ ಬದಲಿಗೆ, ಅವರ ಎಲ್ಲಾ ಸಾಂವಿಧಾನಿಕ ಬದ್ಧವಾದ ಸ್ವಾಯತ್ತತೆ, ಬುಡಕಟ್ಟು ಜನಾಂಗದ ಸ್ಥಾನಮಾನ ಮತ್ತು ಕೋವಿ ಹಕ್ಕನ್ನು ಕೇಳುತ್ತಾ ಬಂದಿದೆ. ಇದು ನ್ಯಾಯ ಸಮ್ಮತವಾಗಿದೆ. ಇವರ 30 ವರ್ಷದ ಹೋರಾಟ ಶ್ಲಾಘನೀಯ ಎಂದರು. ರಾಜ್ಯ ಸಭಾ ಸದಸ್ಯರಾದ ಸುಬ್ರಮಣ್ಯನ್ ಸ್ವಾಮಿ, ಹರಿಪ್ರಸಾದ್ ಮತ್ತು ಕುಪೇಂದ್ರ ರೆಡ್ಡಿ ಇವರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಾಂವಿಧಾನಾತ್ಮಕ ಶಾಂತಿಯುತ ಹೋರಾಟಕ್ಕೆ ಜಯ ಸಿಗಲಿದೆ ಎಂದರು.

ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ ಕೋವಿ ಕೊಡವರ ಧಾರ್ಮಿಕತೆಯ ಪ್ರತೀಕ. ಕೊಡವರಿಗೆ ಎಲ್ಲವೂ ಕೋವಿಯೇ ಆಗಿದೆ. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು. ಸಿಎನ್‍ಸಿ ಕೊಡವ ಭಾಷೆಗಿರುವ ಮಹತ್ವವನ್ನು ಅರಿತು ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಕೊಡವ ಭಾಷೆ ಸೇರ್ಪಡೆಗೊಳ್ಳುವ ಹಂತ ತಲುಪಿದೆ. ನಮಗೆ ಬೇರಾರೂ ಶತ್ರುಗಳಿಲ್ಲ. ನಾವೇ ಶತ್ರುಗಳು. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ನಮಗೆ ಯಶಸ್ಸು ಶ್ರೀಘ್ರದಲ್ಲಿಯೇ ಲಭಿಸಲಿದೆ ಎಂದರು.

ನಮ್ಮ ಕೋವಿ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಯಾವದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿಯೂ ಆಡಳಿತದ ವಿರುದ್ಧ ಕೋವಿ ಬಳಕೆ ಮಾಡಿಲ್ಲ ಎಂದರು. ಪ್ರತೀ ಹೆಣ್ಣು ಮಕ್ಕಳ ಮದುವೆ ಸಮಯದಲ್ಲಿ ಪೆÇೀಷಕರು ಕೋವಿ ವಿನಾಯಿತಿ ಪತ್ರ ಮತ್ತು ಒಂದು ಕೋವಿಯನ್ನು ಉಡುಗೊರೆಯಾಗಿ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಗಣ್ಯರಿಗೆ ಕೊಡವ ವಿಭೂಷಣ ಪ್ರಶಸ್ತಿ: ಕೊಡವರ ಶೌರ್ಯ ಪರಾಕ್ರಮ ಮತ್ತು ಉದಾತ್ತತೆಯ ಕುರಿತು ಮೂರುವರೆ ದಶಕಗಳ ಹಿಂದೆ ‘ಶಕ್ತಿ’ ಕುಟುಂಬದ ದಿ|| ಜಿ.ಯದುಮಣಿ ಅವರು ‘ನಾವು ಕೊಡವರು ಕೊಡಗಿನೊಡೆಯರು- ಸಮರ ರಂಗದ ಹಿರಿಯರು’ ಎಂಬ ಅರ್ಥಪೂರ್ಣ ಗೀತೆಯನ್ನು ರಚಿಸಿದ್ದರು. ಅದನ್ನು ಅವರ ಕುಟುಂಬದವರ ಅನುಮತಿ ಪಡೆದು ಕೊಡವ ಭಾಷೆಗೆ ತರ್ಜುಮೆ ಮಾಡಲಾಗಿದೆ. ಆ ಮಹಾನ್ ಚೇತನ ದಿ|| ಯದುಮಣಿಯವರ ಚಿರನೆನಪಿಗಾಗಿ ಮತ್ತು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಸಹೋದರ ಜಿ.ರಾಜೇಂದ್ರ ಅವರಿಗೆ ಕೊಡವ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅದರಂತೆ ಹಿರಿಯ ಜಾನಪದ ಸಂಶೋಧಕ ಪ್ರಶಸ್ತಿಯನ್ನು ಬಾಚರಣಿಯಂಡ ಪಿ.ಅಪ್ಪಣ್ಣ, ಕೊಡವ ಪದಕೋಶ ಅರಿವೋಲೆ ಕರ್ತೃ ಪ್ರಶಸ್ತಿಯನ್ನು ಬೊವ್ವೇರಿಯಂಡ ಡಾ. ಸಿ ಉತ್ತಯ್ಯ ಮತ್ತು ಪತ್ನಿ ತಂಗಮ್ಮ, ಕೊಡವ ಜಾನಪದ ಕಲಾಕೃತಿಗಳ ಶಿಲ್ಪಿ ಪ್ರಶಸ್ತಿಯನ್ನು ಉದಿಯಂಡ ಎಂ.ಪೆÇನ್ನಪ್ಪ, ಕಲಿಯಂಡ ಎಂ.ಪ್ರಕಾಶ್ ಕಾರ್ಯಪ್ಪ, ಕೊಡವ ಜಾನಪದ ಆಹಾರ ಪದ್ಧತಿ ತಜ್ಞ ಪ್ರಶಸ್ತಿಯನ್ನು ಕಾಳೇಂಗಡ ಪಿ.ರಮೇಶ್ ಕಾರ್ಯಪ್ಪ, ನುರಿತ ಸಹಕಾರಿ ದುರೀಣ ಪ್ರಶಸ್ತಿಯನ್ನು ಜಮ್ಮಡ ಮೋಹನ್, ಅಂತರ್ರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಪ್ರಶಸ್ತಿಯನ್ನು ಮಾಳೇಟಿರ ಎ.ಶ್ರೀನಿವಾಸ್, ಸಮಾಜಸೇವಕ ಪ್ರಶಸ್ತಿಯನ್ನು ಅಜ್ಜಿನಂಡ ಎಂ.ಪಾಪಣ್ಣ, ಪುಳ್ಳೇಂಗಡ ಪಿ.ನಟೇಶ್, ಪೂಮಾಲೆ ಕೊಡವ ವಾರ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರಿಗೆ ಪತ್ರಿಕಾ ರಂಗ ಪ್ರಶಸ್ತಿ , ಪರಿಸರ ರಕ್ಷಣಾ ಪ್ರÀಶಸ್ತಿಯನ್ನು ಡಾ. ಬಿ.ಸಿ. ನಂಜಪ್ಪ ಹಾಗೂ ನಾಟಿ ವೈದ್ಯ ಪದ್ಧತಿಯ ಪಂಡಿತ ಪ್ರಶಸ್ತಿಯನ್ನು ಕರೋಟಿರ ಬಿ.ಅಯ್ಯಣ್ಣ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಂತರ ಕೊಡವ ಸಾಂಪ್ರದಾಯಿಕ ಅಡುಗೆಯ ಊಟ, ಉಪಚಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನಂದಿನೆರವಂಡ ನಿಶಾ ಪ್ರಾರ್ಥನೆ, ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಬಾಚರಣಿಯಂಡ ಚಿಣ್ಣಪ್ಪ ನಿರೂಪಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು.

- ಪ್ರಭಾಕರ್, ದುಗ್ಗಳ