ದೂರದ ಓಟಗಳಿಗೆ ಅತ್ಯಂತ ಕಠಿಣ ಅಭ್ಯಾಸ ಅಗತ್ಯ. ಈ ಓಟಗಳು ಅತೀವ ಕುತೂಹಲವನ್ನು ಕೆರಳಿಸುತ್ತವೆ. ದೂರದ ಓಟದ ಸ್ಪರ್ಧೆಗಳಲ್ಲಿ ಈ ಸ್ಪರ್ಧಿಯೇ ಗೆಲ್ಲಬಹುದು ಎಂದು ನಿರ್ಧರಿಸುವುದು ಕಷ್ಟ ಸಾಧ್ಯ, ಕೊನೇ ಕ್ಷಣದ ತನಕವು ಸ್ಪರ್ಧೆ ಚಾಲ್ತಿಯಲ್ಲಿರು ವುದು. ದೂರದ ಅಳತೆಗೋಲನ್ನು ಹೊಂದಿರುವುದು. ಕ್ರೀಡಾಂಗಣದ ಹೊರಗೆ ಏರು-ತಗ್ಗುಗಳ, ಬೆಟ್ಟ-ಗುಡ್ಡಗಳಲ್ಲಿ ಓಡುವ ಓಟವೇ ಗುಡ್ಡಗಾಡು ಓಟ, ಇದು ಅನೇಕ ಮೈಲುಗಳ ಅಂತರದಲ್ಲಿ ನಡೆಯುವದು, ಅಂತೆಯೇ ಮ್ಯಾರಥಾನ್ ಸ್ಪರ್ಧೆ ಒಂದು ದೂರದ ಓಟದ ಸ್ಪರ್ಧೆ. ಕೀನ್ಯಾ ದೇಶದ ಓಟಗಾರರು ದೂರದ ಓಟದಲ್ಲಿ ಬಹುಪ್ರಸಿದ್ಧರು. ಈ ಓಟಕ್ಕೆ (ದೂರದ ಓಟಗಳಿಗೆ) ದೈಹಿಕ ಕ್ಷಮತೆ ಭಾರೀ ಅಗತ್ಯ. ಮಾನಸಿಕ ಬಲವು ಅಗತ್ಯ. ದೇಶ, ವಿದೇಶಗಳಲ್ಲಿ ಹಲವು ಪ್ರತಿಷ್ಟಿತ ಓಟದ ಸ್ಪರ್ಧೆಗಳಲ್ಲಿ ನಡೆಯುತ್ತಿರು ತ್ತವೆ. ನಮ್ಮ ದೇಶದ ರಾಜ್ಯಗಳಲ್ಲಿ ಹಲವಾರು ಪ್ರತಿಭಾವಂತ ಓಟಗಾರರಿದ್ದಾರೆ. ನಮ್ಮ ಕರ್ನಾಟಕದಲ್ಲೂ ಪ್ರತಿಭಾವಂತ ಓಟಗಾರರಿದ್ದು, ತಮ್ಮ ಪ್ರತಿಭೆಯನ್ನು ರಾಜ್ಯ, ದೇಶ, ಅಂತರರಾಷ್ಟ್ರೀಯ ಮಟ್ಟದಲ್ಲೂ ತೋರಿದ್ದಾರೆ. ಕೊಡಗಿನಲ್ಲೂ ದೂರದ ಓಟಗಾರರು ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರಲ್ಲಿ ಬಾಣಗದ್ದೆ ಸುಜಿತ್ ಕೂಡ ಒಬ್ಬರು. ಇವರು ದೂರದ ಓಟದ ಸಾದನೆಗಳ ಸರದಾರರಾಗಿದ್ದಾರೆ.
ಬಾಲ್ಯ : ಬಾಲ್ಯದಲ್ಲೇ ಆಟೋಟಗಳ ಬಗ್ಗೆ ಸುಜಿತ್ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದರು. ಮಡಿಕೇರಿಯ ಸೆಂಟ್‍ಮೈಕಲ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಇವರು, ಅಣ್ಣ ದಿಲೀಪ್‍ರೊಂದಿಗೆ ದೇವಸ್ತೂರ್‍ನ ಸಣ್ಣ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದರು. ಇವರ ತಂದೆ ಗಣಪತಿ ಬಿ. ಎಂ., ತಾಯಿ ಪದ್ಮಜ ಬಿ. ಜಿ., ತಂದೆ, ತಾಯಿ ಅಣ್ಣನ
ಪ್ರೋತ್ಸಾಹ ಸದಾ ಇವರಿಗಿತ್ತು.
ಸಾಧನೆಗಳು : 2009ರಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಜಿಲ್ಲಾ ಮಟ್ಟದ ದಸರಾ, ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಸಾಧನೆ ಗಳನ್ನು ಮಾಡಿದ್ದಾರೆ. 2010ರಲ್ಲಿ 1500 ಹಾಗೂ 3000ಮೀ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ. 2011ರಲ್ಲಿ ಕೂರ್ಗ ಅಥ್ಲೆಟಿಕ್ ಎಸೋಸಿಯೇಷನ್‍ನಿಂದ ನಡೆದ ಗುಡ್ಡಗಾಡು ಓಟದಲ್ಲಿ ಡಿವಿಜನ್ ಮಟ್ಟದಲ್ಲಿ ಪ್ರಥಮ ಹಾಗೂ ರಾಜ್ಯಮಟ್ಟದಲ್ಲಿ 4ನೇ ಸ್ಥಾನಗಳಿಸಿದ್ದಾರೆ.
ಇವರ ಕಾಲೇಜು ವಿದ್ಯಾಭ್ಯಾಸವು ಮಡಿಕೇರಿಯ ರಾಜರಾಜೇಶ್ವರಿ ಕಾಲೇಜಿನಲ್ಲಿ ನಡೆಯಿತು. ಪಿ.ಯು.ಸಿ. ವ್ಯಾಸಾಂಗದ ಅವಧಿಯಲ್ಲಿ 1500 ಮತ್ತು 3000ಮತ್ತು ಗುಡ್ಡಗಾಡು ಓಟದಲ್ಲಿ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದರು. 2012ರಲ್ಲಿ ದಸರಾ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ 1500 ಮೀ. ಸ್ಪರ್ಧೆಯು ಉಡುಪಿಯಲ್ಲಿ ನಡೆದಿದ್ದು, 5ನೇ ಸ್ಥಾನವನ್ನು ರಾಜ್ಯಮಟ್ಟದಲ್ಲಿ ಗಳಿಸಿದರು. ಅದೇ ವರ್ಷ ಕೂರ್ಗ್ ಅಥ್ಲೆಟಿಕ್ ಎಸೋಸಿಯೇಷನ್‍ನಿಂದ ರಾಜ್ಯಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ 1500ಮೀ. ಓಟದಲ್ಲಿ ಜಿಲ್ಲೆಗೆ ಪ್ರಥಮವೆನಿಸಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದರು.
2011, 2012ರಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಇತರೆ ಸ್ಪರ್ಧೆಗಳಲ್ಲೂ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ. 2013 ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಯೂನಿವರ್‍ಸಿಟಿಗೆ ಗುಡ್ಡಗಾಡು ಓಟ ಮತ್ತು 1500 ಮೀ. ಓಟಕ್ಕೆ ಆಯ್ಕೆಯಾಗಿ 1500 ಮೀ. ಓಟದಲ್ಲಿ 4ನೇ ಸ್ಥಾನ ಪಡೆದರು. ಗುಡ್ಡಗಾಡು ಓಟದಲ್ಲಿ ಭಾಗವಹಿಸಿದರು.
2014-15ರಲ್ಲಿ ಯೂನಿರ್ವಸಿಟಿ (ಮಂಗಳೂರು ವಿಶ್ವವಿದ್ಯಾಲಯ) ಆಯ್ಕೆಯಾಗಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಕೂಟಗಳಲ್ಲಿ ಭಾಗವಹಿಸಿದರು.
ಈಗ ಕೊಡಗಿನಲ್ಲಿ ನಡೆಯುವ ಎಲ್ಲಾ ಗುಡ್ಡಗಾಡು ಓಟ ಹಾಗೂ ಇತರೆ ದೂರದ ಓಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ತನ್ನ ಸಾಧನೆಯಲ್ಲಿ ದೈಹಿಕ ಶಿಕ್ಷಣ ತರಬೇತುದಾರರು ಹಾಗೂ ಅಣ್ಣ ದಿಲೀಪ್ ನೀಡಿದ ಮಾರ್ಗದರ್ಶನವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಯುವ ಪ್ರತಿಭೆಗಳಿಗೆ, ತರಬೇತಿ ನೀಡಿ, ಸಾಧಕರನ್ನಾಗಿ ಮಾಡುವ ಆಸೆ, ಗುರಿ ಹೊತ್ತುಕೊಂಡಿದ್ದೇನೆ ಎನ್ನುತ್ತಾರೆ.
ಸುಜಿತ್‍ಅವರು ದೂರದ ಓಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಿ ಸಾಧನೆಗಳ ಸರದಾರರಾಗಲಿ ಅಂತೆಯೇ ಅವರ ತರಬೇತಿಯಿಂದ ಯುವ ಪ್ರತಿಭೆಗಳು ಅರಳುವಂತಾಗಲಿ ಎಂದು ಹಾರೈಸೋಣ.
?ಹರೀಶ್ ಸರಳಾಯ, ಮಡಿಕೇರಿ.