ಗೋಣಿಕೊಪ್ಪ ವರದಿ, ಡಿ. 18: ಕುಮಟೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಸಾವಿಗೀಡಾಗಿರುವ ಘಟನೆ ನಡೆದಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೃಷಿಕ ಕಳ್ಳಂಗಡ ಕೌಶಿಕ್ ರಮೇಶ್ ಎಂಬವರಿಗೆ ಸೇರಿದ ತುಂಬು ಗರ್ಭಿಣಿ ಹಸುವನ್ನು ಬುಧವಾರ ಮುಂಜಾನೆ ಕೊಂದು ಹಾಕಿರುವ ಹುಲಿ, ದೇಹದ ಒಂದಷ್ಟು ಭಾಗವನ್ನು ತಿಂದು ತೋಟದಲ್ಲಿ ಮರೆಯಾಗಿದೆ. ಭಯಗೊಂಡಿರುವ ಗ್ರಾಮಸ್ಥರು ಹುಲಿ ಹಿಡಿಯುವಂತೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.