*ಸಿದ್ದಾಪುರ, ಡಿ. 18: ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಆಕೆಯ ನೆರವಿನಿಂದ ಅಣ್ಣನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪೊಲೀಸರು ಆರೋಪಿ ಗಳನ್ನು ಬಂಧಿಸಿದ್ದಾರೆ. ಅಭ್ಯತ್‍ಮಂಗಲ ಪೈಸಾರಿ ನಿವಾಸಿ ಕೊರಗ ಎಂಬವರ ಪುತ್ರ ರಾಜು (40) ಕೊಲೆಗೀಡಾದ ದುರ್ದೈವಿ ಯಾಗಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೊರಗ ಎಂಬವರಿಗೆ ರಾಜು ಹಾಗೂ ಪ್ರಶಾಂತ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಪತ್ನಿ ಗಿರಿಜಾ ಅವರು ಪಾಶ್ರ್ವವಾಯು ಪೀಡಿತ ರಾಗಿದ್ದು ಕಣ್ಣು ಕಾಣದೆ ಕಿವಿ ಕೇಳದೆ ಹಾಸಿಗೆ ಹಿಡಿದಿದ್ದಾರೆ. ಮಗ ರಾಜು ಮೂರ್ನಾಡುವಿನ ಲೀಲಾವತಿ ಯವರನ್ನು ವಿವಾಹವಾಗಿದ್ದು, ಅವರಿಗೆ 2 ಗಂಡು 1 ಹೆಣ್ಣು ಮಗುವಿದೆ. ರಾಜು ಅವರ ತಮ್ಮ ಪ್ರಶಾಂತ್ ಅವಿವಾಹಿತ ನಾಗಿದ್ದು, ಗೋಣಿಕೊಪ್ಪಲಿನಲ್ಲಿ ಮೆಕ್ಯಾನಿಕ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರಶಾಂತ್‍ಗೆ ತನ್ನ ಅತ್ತಿಗೆ ಲೀಲಾವತಿಯವರೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿ

(ಮೊದಲ ಪುಟದಿಂದ) ಅಣ್ಣ ತಮ್ಮಂದಿರ ನಡುವೆ ಹಾಗೂ ಗಂಡ ಹೆಂಡತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿದ್ದು ಈ ಕಾರಣಕ್ಕಾಗಿ ಕೆಲ ದಿನಗಳ ಹಿಂದೆ ಲೀಲಾವತಿ ತವರು ಮನೆಗೆ ತೆರಳಿದ್ದರು ಎಂದು ಹೇಳಲಾಗಿದೆ.

ತಾ. 17 ರಂದು ಬೆಳಗ್ಗಿನಿಂದಲೇ ರಾಜು ಹಾಗೂ ಲೀಲಾವತಿ ಅಕ್ರಮ ಸಂಬಂಧದ ವಿಚಾರದಲ್ಲಿ ಜಗಳವಾಡಿದ್ದು, ಮಧ್ಯಾಹ್ನ ಜಗಳ ತಾರಕಕ್ಕೇರಿ ಪ್ರಶಾಂತ್ ಹಾಗೂ ಲೀಲಾವತಿ ರಾಜುವಿನ ಕುತ್ತಿಗೆಗೆ ಹಗ್ಗ ಬಿಗಿದು ಬೆಡ್‍ಶಿಟ್ ಮುಚ್ಚಿ ಉಸಿರುಗಟ್ಟಿಸಿ ಕೊಲೆಗೈದರೆಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

ಕೊರಗ ಬೊಯಿಕೇರಿಯಲ್ಲೇ ವಾಸ್ತವ ಹೂಡಿ ಕೂಲಿ ಕೆಲಸ ಮಾಡಿ ವಾರಕೊಮ್ಮೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ತಾ.17 ರಂದು ಸಂಜೆ ಪ್ರಶಾಂತ್ ಅಣ್ಣನನ್ನು ಕೊಲೆ ಮಾಡಿದ ನಂತರ ಬೊಯಿಕೇರಿಗೆ ಬಂದು ತಂದೆಯವರಲ್ಲಿ ಅಣ್ಣನಿಗೆ ಎದೆನೋವು ಹುಷಾರಿಲ್ಲ ಎಂದು ಕರೆದುಕೊಂಡು ಮನೆಗೆ ತೆರಳಿದ್ದು, ಆನಂತರ ಗ್ರಾಮಸ್ಥರು ನೆರೆ ಕರೆಯವರು ಬಂದಾಗ ರಾಜು ಮೃತಪಟ್ಟಿರುವುದು ಕಂಡುಬಂದಿದೆ. ಎದೆನೋವು ಹುಷಾರಿಲ್ಲ ಎಂದು ಮಲಗಿದ್ದರೆಂದು ಪ್ರಶಾಂತ್ ಹಾಗೂ ಲೀಲಾವತಿ ನಾಟಕವಾಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‍ಐ ಚಂದ್ರಶೇಖರ್, ಚೆಟ್ಟಳ್ಳಿ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಶಶಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೈದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. -ಅಂಚೆಮನೆ ಸುಧಿ