*ಗೋಣಿಕೊಪ್ಪಲು, ಡಿ. 17: ಜಿಲ್ಲೆ ಅಭಿವೃದ್ಧಿ ಹೊಂದಲು ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇದು ಕಾವೇರಿ ನೀರು ಹುಟ್ಟುವ ನಾಡಿಗೆ ನೀಡುವ ಗೌರವ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಹೇಳಿದ್ದಾರೆ. ಕಾನೂರು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿಯ 5 ಶಾಸಕರಲ್ಲಿ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕೊಡಗು ಜಿಲ್ಲೆಯು ಬಿಜೆಪಿಯ ಭದ್ರ ಕೋಟೆಯಾಗಿದ್ದು, ನಾಲ್ಕೈದು ಬಾರಿ ಶಾಸಕರು ನೀಡಿದ ಹೆಗ್ಗಳಿಕೆ ಇದೆ. ಆದರೆ ಕಳೆದ ಕೆಲ ವರ್ಷಗಳಿಂದ ಕೊಡಗಿನ ಶಾಸಕರಿಗೆ ಸಚಿವ ಸ್ಥಾನವನ್ನು ನೀಡುತ್ತಿಲ್ಲ. ಸಚಿವ ಸ್ಥಾನ ನೀಡದೆ ಇದ್ದಲ್ಲಿ ಜಿಲ್ಲಾದ್ಯಾಂತ ನಾವೆಲ್ಲರು ಒಗ್ಗಟ್ಟಿನಿಂದ ಹೋರಾಟ ನಡೆಸಲು ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯನವರೊಂದಿಗೆ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಆರ್.ಎಂ.ಸಿ. ಅಧ್ಯಕ್ಷ ಮಾಚಂಗಡ ಸುಜಾ ಬೋಪಯ್ಯ, ಗ್ರಾ.ಪಂ. ಸದಸ್ಯ ಶಿಲ್ಪ, ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾನೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್ ಮಾಚು, ಕೊತೂರು ಬೂತ್ ಅಧ್ಯಕ್ಷ ಅಣ್ಣಾಳಮಾಡ ನವೀನ್, ಮಲ್ಲಮಾಡ ಈಶ್ವರ, ಕಾನೂರು ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಉಪಾಧ್ಯಕ್ಷ ದೀಪಕ್, ಬೆಕ್ಕೆಸೊಡ್ಲೂರು ಕ್ಲಬ್ ಕಾರ್ಯದರ್ಶಿ ಮಚ್ಚಿಮಾಡ ಡಾಲಿ, ಪೆÇನ್ನಂಪೇಟೆ ವಿ.ಎಸ್. ಎಸ್.ಎನ್ ಉಪಾಧ್ಯಕ್ಷ ನಿರನ್‍ಮೊಣ್ಣಪ್ಪ, ಪ್ರಮುಖರಾದ ತೀತಮಾಡ ಜಯ ಹಾಜರಿದ್ದರು.