ಮಡಿಕೇರಿ, ಡಿ. 17: ಪ್ರಸಕ್ತ ಸಾಲಿನಲ್ಲಿ ಮಡಿಕೇರಿ ತಾಲೂಕಿನ ಶಾಲೆಗಳಲ್ಲಿ ಕಲಿಯುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಫಿಸಿಯೋಥೆರಫಿ ಸೇವೆ ಪಡೆಯಲು ಒಬ್ಬರು ಫಿಸಿಯೋಥೆರಫಿಸ್ಟ್ರನ್ನು ಮಾಸಿಕ ಗೌರವಧನ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆಸಕ್ತ ಬಿಪಿಟಿ/ಡಿಪಿಟಿ ವಿದ್ಯಾರ್ಹತೆ ಹೊಂದಿರುವ ಫಿಸಿಯೋಥೆರಫಿಸ್ಟ್ ಅರ್ಜಿಯನ್ನು ಖುದ್ದಾಗಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗೆ ದೂ. 9480695263 ಅನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.