ನಾಪೋಕ್ಲು, ಡಿ. 17: ಅಖಿಲ ಹಿಂದೂ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಮಾತೃಶ್ರೀ ಸಮಿತಿ ಕರಿಕೆ ಎಳ್ಳುಕೊಚ್ಚಿಯ ವತಿಯಿಂದ ತಾ. 19ರಂದು ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುವುದು.
ದೀಪೋತ್ಸವ ಕಾರ್ಯಕ್ರಮವು ಮುಂಜಾನೆ 5.30 ಗಂಟೆಗೆ ಶಂಖನಾದದೊಂದಿಗೆ ಪ್ರಾರಂಭವಾಗಲಿದ್ದು 6 ಗಂಟೆಯಿಂದ 7 ಗಂಟೆಯವರೆಗೆ ಗಣಪತಿ ಹೋಮ, ಬಳಿಕ ಉಷಾಪೂಜೆ ನಡೆಯಲಿದೆ. 10 ಗಂಟೆಯಿಂದ 12 ಗಂಟೆಯವರೆಗೆ ಗೀತಾ ಮಹಾತ್ಮೆ ಪಾರಾಯಣ ನಡೆಯಲಿದೆ.12.30ಕ್ಕೆ ಮಧ್ಯಾಹ್ನದ ಪೂಜೆ ನಡೆಯಲಿದ್ದು; ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಕರಿಕೆ ಚೆತ್ತುಕಾಯದ ಶ್ರೀ ಶಾಸ್ತಾವನದಿಂದ ವಾದ್ಯಮೇಳ, ತಾಲಪೊಲಿ ಮತ್ತು ಪಾಲೆಕೊಂಬು ಮೆರವಣಿಗೆಯೊಂದಿಗೆ ಪೂಜಾಮಂದಿರದಲ್ಲಿ ರಾತ್ರಿ ಏಳು ಗಂಟೆಯಿಂದ ದೀಪಾರಾಧನೆ ಹಾಗೂ ಭಜನೆ ನಡೆಯಲಿದೆ. ರಾತ್ರಿ 11 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.