ಬೆಂಗಳೂರು, ಡಿ. 17: ಈ ಬಾರಿ ಎಸ್‍ಎಸ್‍ಎಲ್‍ಸಿ ಇಂಗ್ಲೀಷ್ ಪರೀಕ್ಷೆ ಬರೆಯಲು ನಿಗಧಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚುವರಿ ಸಮಯವಕಾಶ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ನಡೆದ ನೇರ ಫೋನ್ ಕಾರ್ಯಕ್ರಮದಲ್ಲಿ ಓರ್ವ ವಿದ್ಯಾರ್ಥಿಯು ಇಂಗ್ಲೀಷ್ ಪರೀಕ್ಷೆ ಬರೆಯಲು ಹೆಚ್ಚುವರಿ ಸಮಯ ನೀಡುವಂತೆ ಕೇಳಿಕೊಂಡಾಗ; ಇದಕ್ಕೆ ಉತ್ತರಿಸಿದ ಸಚಿವರು ಈ ಸಂಬಂಧ ಈಗಾಗಲೇ ಇಲಾಖೆ ಕ್ರಮಕೈಗೊಂಡಿರುವದಾಗಿ ತಿಳಿಸಿದರು.