ಸೋಮವಾರಪೇಟೆ,ಡಿ.14: ಸಿಲ್ವರ್ ಮರದ ನಾಟಾಗಳ ಕೆಳಗೆ ಹೆಬ್ಬಲಸಿನ ಮರಗಳ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯಾಧಿಕಾರಿಗಳು, ಮಾಲು ಸಹಿತ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ರಮ ಮರ ಸಾಗಾಟದಲ್ಲಿ ಭಾಗಿಯಾಗಿದ್ದ ಇತರ ಈರ್ವರು ಆರೋಪಿಗಳು ಪರಾರಿಯಾಗಿದ್ದಾರೆ. ವೀರಾಜಪೇಟೆ ತಾಲೂಕಿನ ಸಿ.ಎಸ್.ಸುಗುಣ, ಚೆನ್ನಯ್ಯನಕೋಟೆಯ ಪಿ.ಕೆ. ಮಜೀದ್ ಅವರುಗಳನ್ನು ಬಂಧಿಸಿದ್ದು, ಲಾರಿ ಮಾಲೀಕ ರಫೀಕ್ ಹಾಗೂ ನಾಪೋಕ್ಲು ನಿವಾಸಿ ಹಂಸ ಎಂಬವರುಗಳು ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಓಡಿ ತಲೆ ಮರೆಸಿಕೊಂಡಿದ್ದಾರೆ.