ಮಡಿಕೇರಿ, ಡಿ. 14: ವ್ಯಾಪಾರಿಗಳು, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡು ನಂತರ ಮಾಸಿಕ ನಿಶ್ಚಿತ ರೂ. 3 ಸಾವಿರ ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆ ನೀಡುವ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಹಾಗೂ ವಂತಿಕೆ ಆಧಾರಿದ ಪಿಂಚಣಿ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿರುತ್ತದೆ.
ಯೋಜನೆಯ ಫಲಾನುಭವಿಗಳು: ಈ ಯೋಜನೆಯಡಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಣಿ ಮಾಲೀಕರು, ಎಣ್ಣೆ ಗಿರಣಿ ಮಾಲೀಕರು ವರ್ಕ್‍ಶಾಪ್ ಮಾಲೀಕರು, ಕಮೀಷನ್ ಏಜೆಂಟ್ಸ್, ರಿಯಲ್ ಎಸ್ಟೇಟ್‍ನ ಬ್ರೋಕರ್ಸ್, ಸಣ್ಣ ಹೊಟೇಲ್ ಹಾಗೂ ರೆಸ್ಟೋರೆಂಟ್‍ನ ಮಾಲೀಕರು ಹಾಗೂ ಅಂತಹ ಇತರ ಸಣ್ಣ ವ್ಯಾಪಾರಗಳಲ್ಲಿ ತೊಡಗಿಸಿಕೊಂಡ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಫಲಾನುಭವಿ ಗಳಾಗಿದ್ದಾರೆ.
ಯೋಜನೆಗೆ ಸೇರಲು ಅರ್ಹತೆಗಳು: 18 ರಿಂದ 40 ವರ್ಷದವರಾಗಿರಬೇಕು. ವಾರ್ಷಿಕ ವಹಿವಾಟು ಗರಿಷ್ಠ ರೂ 1.50 ಕೋಟಿಗಳ ಒಳಗಿರಬೇಕು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಇಎಸ್‍ಐ, ಇಪಿಎಫ್, ಎನ್‍ಪಿಎಸ್, ಪಿಎಂಎಸ್‍ವೈಎಂ. ಒಇಎಂಕೆಎಂವೈ ಯೋಜನೆಯ ಫಲಾನುಭವಿ ಗಳಾಗಿರಬಾರದು.
ಯೋಜನೆ ನೋಂದಣಿ ವಿಧಾನಗಳು: ಅರ್ಹ ಫಲಾನುಭವಿಗಳು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (ಸಿಎಸ್‍ಸಿ)ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿದೆ. ಸಿಎಸ್‍ಸಿಗಳ ವಿವರಗಳನ್ನು ಹತ್ತಿರದ ಎಲ್‍ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸ್‍ಐ, ಕಾರ್ಪೋರೇಷನ್ ಹಾಗೂ ಭವಿಷ್ಯ ನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ hಣಣಠಿ://ಟoಛಿಚಿಣoಡಿ.ಛಿsಛಿಛಿಟouಜ.iಟಿ ಗಳಲ್ಲಿ ಪಡೆಯಬಹುದಾಗಿದೆ.
ಫಲಾನುಭವಿಗಳು ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಐಎಫ್‍ಏಸ್‍ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ , ಚೆಕ್ ಪುಸ್ತಕ, ಬ್ಯಾಂಕ್ ಸ್ಟೇಟ್‍ಮೆಂಟ್) ನಾಮ ನಿರ್ದೇಶಿತರ ವಿವರಗಳು ಮತ್ತು ಮೊಬೈಲ್‍ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್‍ಗಳಿಗೆ ತೆರಳುವುದು. ಅನುಬಂಧದಲ್ಲಿ ತಿಳಿಸಿರು ವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸುವುದು ಹಾಗೂ ತದನಂತರ ಮಾಸಿಕ ವಂತಿಗೆಯನ್ನು ಅವರ ಖಾತೆಯಿಂದ ಅಟೋಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
ಯೋಜನೆಯ ಸೌಲಭ್ಯಗಳು: ಯೋಜನೆಯಡಿ ವಂತಿಗೆದಾರರು ಮಾಹೆಯಾನ ಪಾವತಿಸಬೇಕಾದ ವಂತಿಕೆಯನ್ನು, ಯೋಜನೆಯಡಿ ತೊಡಗಿಸಿಕೊಂಡ ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿದ್ದು, ಅಂತಹ ದರವು ಅತ್ಯಂತ ಕಡಿಮೆ ಇದ್ದು, ಕನಿಷ್ಟ ರೂ. 55 ಹಾಗೂ ಗರಿಷ್ಠ ರೂ. 200 ಆಗಿರುತ್ತದೆ.
ಕೇಂದ್ರ ಸರ್ಕಾರವು, ವಂತಿಕೆ ದಾರರು ಮಾಹೆಯಾನ ಪಾವತಿಸುವ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ.
60 ವರ್ಷ ಪೂರ್ಣಗೊಂಡ ನಂತರ ವಂತಿಕೆದಾರರು (ಫಲಾನುಭವಿಯು) ತಿಂಗಳಿಗೆ ನಿಶ್ಚಿತ ರೂ. 3 ಸಾವಿರ ಗಳ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ.
ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆ ಹೊಂದಿ ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ ಅವನ ಮತ್ತು ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಗೆಯನ್ನು ಪಾವತಿಸಿ ಮುಂದುವರಿ ಸಬಹುದಾಗಿದೆ.
ಪಿಂಚಣಿ ಆರಂಭಗೊಂಡ ನಂತರ ವಂತಿಗೆದಾರರು ಮೃತಪಟ್ಟಲ್ಲಿ, ಅವರ ಪತ್ನಿ, ಪತಿ ಪಿಂಚಣಿಯ ಶೇ. 50 ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರು. ವಂತಿಗೆದಾದದರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಲ್ಲಿ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಗೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿದ್ದಾರೆ. ಯೋಜನೆಯ ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್‍ಎಂಎಸ್ ಮೂಲಕ ಎಲ್ಲ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.
ಸಹಾಯ ಕೇಂದ್ರಗಳು ಮತ್ತು ಕಚೇರಿಯ ವಿವರಗಳು: ಎಲ್ಲಾ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಚೇರಿಗಳು. ರಾಜ್ಯಾದ್ಯಂತ ಎಲ್ಲಾ ಎಲ್‍ಐಸಿಯ ಶಾಖಾ ಕಚೇರಿಗಳು. ಇಪಿಎಫ್‍ಒ ಮತ್ತು ಇಎಸ್‍ಐಸಿಗಳು, ಟಾಲ್ ಫ್ರೀ ಕಾಲ್ ಸೆಂಟರ್ ಸಂಖ್ಯೆ 1800-276-688. ಎಲ್‍ಐಸಿಯು ವೆಬ್‍ಸೈಟ್ ವಿಳಾಸ ತಿತಿತಿ. ಐiಛಿiಟಿಜiಚಿ.iಟಿ ಮತ್ತು mಚಿಚಿಟಿಜhಚಿಟಿ. iಟಿ ಸಮೀಪದ ಸಿಎಸ್‍ಸಿ ಸರ್ವಿಸ್ ಸೆಂಟರ್‍ಗಳಿಗಾಗಿ hಣಣಠಿ://ಟoಛಿಚಿಣoಡಿ.ಛಿsಛಿಛಿಟouಜ.iಟಿ ಕಾರ್ಮಿಕ ಇಲಾಖೆಯ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದಾಗಿದೆ.