ಅಮ್ಮತ್ತಿ, ಡಿ. 14: ಕೊಡಗು ದಫ್ ಸಮಿತಿ ವತಿಯಿಂದ ಎನ್.ಸಿ.ಟಿ. ಎಂಟರ್‍ಪ್ರೈಸಸ್ ಪ್ರಾಯೋಜಕತ್ವದಲ್ಲಿ ಚೋಕಂಡಳ್ಳಿ ಜುಮಾ ಮಸೀದಿ ಬಳಿ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ದಫ್ ಸ್ಪರ್ಧೆಗೆ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಚೋಕಂಡಳ್ಳಿ ಜುಮಾ ಮಸೀದಿ ಖತೀಬ್ ಸಲಾಂ ಝುಹರಿ ಮಾತನಾಡಿ ಇಸ್ಲಾಂನ ಸಾಂಸ್ಕೃತಿಕ ಕಲೆಯಾದ ದಫ್ ಕಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಮಸೀದಿ ಅದ್ಯಕ್ಷ ಹನೀಫ್ ಪಿ.ಎ. ಮಾತನಾಡಿ ಇಸ್ಲಾಂನ ಸಾಹಿತ್ಯ, ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಯ ಅಬ್ಬರಗಳ ನಡುವೆ ನಲುಗಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಇದೀಗ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಜಾರಿಯಾಗಿ ರುವ ಸಂವಿಧಾನ ವಿರೋಧಿ ಪೌರತ್ವ ಮಸೂದೆಯನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಲು ಸಜ್ಜಾಗಬೇಕು ಎಂದರು. ಚೋಕಂಡಳ್ಳಿ ಬಸ್ತಾನುಲ್ ಉಲಮಾ ಮದ್ರಸದ ಮುಖ್ಯ ಶಿಕ್ಷಕ ಜಲೀಲ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು

ಬಿಳುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ

(ಮೊದಲ ಪುಟದಿಂದ) ಕೆ.ವೈ. ಹಂಝ ಹಾಜಿ, ಮುಸ್ಲಿಂ ಬ್ಯಾಂಕ್ ಉಪಾಧ್ಯಕ್ಷ ಝುಬೈರ್ ಕೆ.ಎ, ಮಾತನಾಡಿದರು. ಚೋಕಂಡಳ್ಳಿ ಜುಮಾ ಮಸೀದಿ ಸಹ ಕಾರ್ಯದರ್ಶಿ ಸೈಫುದ್ದೀನ್ ಎನ್.ಎಂ, ಸದಸ್ಯರು ಗಳಾದ ಶಹಬಾನ್ ಕೆ.ಎಂ, ಪಿ.ಎಫ್. ಅಶ್ರಫ್, ಅಶ್ರಫ್ ಅಲಿ ಡಿ.ಎಫ್, ಮಾಜಿ ಅದ್ಯಕ್ಷ ಪಕ್ರುದ್ದೀನ್ ಹಾಜಿ ಡಿ.ಎ, ಹಸನ್ ಹಾಜಿ ಪಿ.ಎಂ, ಉಪಾಧ್ಯಕ್ಷ ಸೂಫಿ ಕೆ.ಎಂ, ಮಂಡಲ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಕೆ.ಎ, ಹಂಝ ಡಿ.ಎಸ್. ಜೋಕಂಡಳ್ಳಿ, ಕೊಮ್ಮೆತ್ತೋಡು ಜುಮಾ ಮಸೀದಿ ಅದ್ಯಕ್ಷ ಕೆ.ಎಂ.ಮೂಸಾನ್, ಬಿಳುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿರಾಜುದ್ದೀನ್ ಪಿ.ಎ, ಕೆ.ಡಿ.ಎಸ್. ಸ್ವಾಗತ ಸಮಿತಿ ಅದ್ಯಕ್ಷ ಡಿ.ಎಂ. ಉನೈಸ್, ಉಪಾಧ್ಯಕ್ಷ ಎಂ.ಎ. ಶಫೀಕ್, ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ರಫಿ ಕೆ.ಎಂ, ಶಿಕ್ಷಕರಾದ ಸಿರಾಜುದ್ದೀನ್ ಝುಹರಿ, ನಿಸಾರ್ ಉಸ್ತಾದ್, ನಿವೃತ್ತ ಸೈನಿಕ ಡಿ.ಎಚ್. ಸಮದ್ ಚೋಕಂಡಳ್ಳಿ ಮೊದ ಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೊಡಗು ದಫ್ ಸಮಿತಿಯ ಪದಾಧಿಕಾರಿಗಳಾದ ಕೆ.ಎಂ.ಫೈಝಿ ಚಿಟ್ಟಡೆ, ಎಚ್.ಎಂ. ಶರೀಫ್ ಕುಶಾಲನಗರ, ಎನ್.ಎಂ. ಬಶೀರ್ ಗುಂಡಿಕೆರೆ, ಅಶ್ರಫ್ ಬಿ.ಯು. ಎಮ್ಮೆಮಾಡು, ನಾಸಿರ್ ಕೂಡಿಗೆ, ಕರೀಂ ಕಡಂಗ, ಕೆ.ಎ. ಹನೀಫ್ ಎನ್.ಸಿ.ಟಿ, ಝುಬೈರ್ ಕಡಂಗ, ಅಬ್ಬಾಸ್ ಝೈನಿ ದೇವಣಗೇರಿ, ಎ.ಎಂ. ರಶೀದ್ ಪೊನ್ನಂಪೇಟೆ, ಎಸ್.ಎಂ.ಮುಬಾರಕ್, ಮೊದ ಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊಡಗು ದಫ್ ಸಮಿತಿಯ ಸಹ ಕಾರ್ಯದರ್ಶಿ ಶಫೀಕ್ ಗುಂಡಿಕೆರೆ ಸ್ವಾಗತಿಸಿ, ಅಧ್ಯಕ್ಷ ಪಿ.ಎ. ಅಬ್ದುಲ್ ಮಜೀದ್ ವಂದಿಸಿದರು. ಸದಸ್ಯ ಎಂ.ಎ. ತೌಸೀಫ್ ಅಹ್ಮದ್ ಅಮ್ಮತ್ತಿ ಕಾರ್ಯಕ್ರಮ ನಿರೂಪಿಸಿದರು.

ತೀರ್ಪುಗಾರರಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ದಫ್ ತರಬೇತುದಾರರಾದ ರಫೀಕ್ ಮುಸ್ಲಿಯಾರ್ ಕಡಬ, ಇಬ್ರಾಹಿಂ ಕಡಬ, ಝಕರಿಯ ಮುಸ್ಲಿಯಾರ್ ಕಡಬ ಸಹಕರಿಸಿದರು.