ಮಡಿಕೇರಿ, ಡಿ. 14: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಲು ವಿದ್ಯಾರ್ಹತೆ ನಿಗದಿಪಡಿಸಿ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಆಡಳಿತಾಧಿಕಾರಿ-(ಮಹಿಳಾ ಅಭ್ಯರ್ಥಿಗೆ ಮೀಸಲು): ಹುದ್ದೆಗಳ ಸಂಖ್ಯೆ: 1, ವಿದ್ಯಾರ್ಹತೆ ಎಂಎಸ್ಡಬ್ಲ್ಯು, ಮಾಸ್ಟರ್ಸ್ ಇನ್ ಲಾ, ಎಂಎಸ್ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲೆಪ್ಮೆಂಟ್ ಅಂಡ್ ಪ್ಯಾಮಿಲಿ ರಿಲೇಷನ್) ಎಂಎಸ್ಸಿ, ಫಿಸಿಯೋಲಜಿ, ಎಂಎಸ್ಸಿ ಫಿಸಿಸ್ಟರಿ (ವಿತ್ 5 ಇಯರ್ಸ್ ಎಕ್ಸ್ಪೀರಿಯನ್ಸ್ ಇನ್ ಕೌನ್ಸಿಲಿಂಗ್ ಫೀಲ್ಡ್) ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿ ಕಡ್ಡಾಯ. ಮಾಸಿಕ ಗೌರವಧನ ರೂ. 40,000.
ಪ್ಯಾರಾಲೀಗಲ್ ಪರ್ಸನಲ್/ ಲಾಯರ್: (ಮಹಿಳಾ ಅಭ್ಯರ್ಥಿಗೆ ಮೀಸಲು): ಹುದ್ದೆಗಳ ಸಂಖ್ಯೆ: 2, ವಿದ್ಯಾರ್ಹತೆ: ಕಾನೂನು ಪದವೀಧರರು ಅನುಭವ: ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಟ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಕಂಪ್ಯೂಟರ್ ತರಬೇತಿ ಕಡ್ಡಾಯ. ಮಾಸಿಕ ಗೌರವಧನ ರೂ. 25,000.
ಸಖಿ ಒನ್ ಸ್ಟಾಪ್ ಸೆಂಟರ್ಗಳಲ್ಲಿ ನೇಮಕವಾಗುವ ಸಿಬ್ಬಂದಿಗಳು 24x7 ಕಾರ್ಯನಿರ್ವಹಿಸಲು ಅನುವಾಗುವಂತೆ ವಿವಿಧ ಪಾಳಿಗಳಲ್ಲಿ (ಶಿಪ್ಟ್ಗಳಲ್ಲಿ) ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕಿದೆ. ಅರ್ಜಿ ಸಲ್ಲಿಸಲು ತಾ. 24 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಇಲ್ಲಿಯ ದೂರವಾಣಿ 08272-298379 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.
ಹೈನುಗಾರಿಕೆ ತರಬೇತಿಗೆ
ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ವತಿಯಿಂದ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ಉಚಿತ ತರಬೇತಿ ಶಿಬಿರವು 2020ರ ಜನವರಿ ಮಾಹೆಯಲ್ಲಿ ಬಾಗಲಕೋಟೆಯಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಮತ್ತಿತರ ವಿಷಯ ಕುರಿತು ತರಬೇತಿ ನಿಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ 18 ರಿಂದ 55 ವರ್ಷದೊಳಗಿನ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು ಮೊ.ನಂ. 9482630790 ಗೆ ಕರೆ ಮಾಡಿ ತಾ. 31 ರೊಳಗೆ ತಮ್ಮ ಹೆಸರು ನೋಂದಾಯಿಸುವಂತೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ತರಬೇತಿ ಕೇಂದ್ರದ ವಿಳಾಸ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿವಿಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103. ಸ್ಥಿರ ದೂ.ಸಂ :08354-244028/244048 ನ್ನು ಸಂಪರ್ಕಿಸಬಹುದು ಎಂದು ಕಾರ್ಯನಿರ್ವಹಕ ನಿರ್ದೇಶಕರು ತಿಳಿಸಿದ್ದಾರೆ.