ಮಡಿಕೇರಿ, ಡಿ. 15: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿ.ಐ.ಟಿ.ಯು) ಮಡಿಕೇರಿ ತಾಲೂಕು ಸಮಾವೇಶ ಮತ್ತು ಬೀಳ್ಕೊಡುಗೆ ಸಮಾರಂಭ ಬಾಲಭವನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಿ.ಆರ್. ಭರತ್ ಮಾತನಾಡಿ, ಬಹಳ ಕಷ್ಟದ ಕಾಲಘಟ್ಟದಲ್ಲಿ ನೌಕರರ ಸಂಘವನ್ನು ಕಟ್ಟಿದ್ದರಿಂದ ಇಂದು ಒಬ್ಬ ಬಿಲ್ ಕಲೆಕ್ಟರ್ ಸಹಾಯಕ ಲೆಕ್ಕಪರಿಶೋಧಕ ಹುದ್ದೆಗೆ, ಕಾರ್ಯದರ್ಶಿ ಹುದ್ದೆಗೆ, ಬಡ್ತಿ ಹೊಂದಲು ಸಾಧ್ಯವಾಗಿದೆ. ನೌಕರರ ಸಂಬಳವನ್ನು ಹೆಚ್ಚಿಸಲು ಸಾಧ್ಯವಾಗಿದೆ, ಆದ್ದರಿಂದ ಸಂಘವನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸಬೇಕು ಎಂದರು.
ಈ ಸಂದರ್ಭ ಬಡ್ತಿಹೊಂದಿದ ಪಿ.ಜೆ.ರಾಧಾಕೃಷ್ಣ, ಅನಿತಾ, ಪಿ.ಪಿ.ಸುಕುಮಾರ, ಸೀನಪ್ಪ, ಪಿ.ಜಿ. ವಿಠಲರವರನ್ನು ಬೀಳ್ಕೊಡಲಾಯಿತು.
ವೀರಾಜಪೇಟೆ ತಾಲೂಕು ಅಧ್ಯಕ್ಷ ಹರೀಶ್, ಮಹದೇವ, ಸೋವಿಯತ್, ಹರೀಶ್ ಅಮ್ಮತ್ತಿ, ವೆಂಕಟೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಜಯರಾಮ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನವೀನ್ ಹಾಜರಿದ್ದರು.