ಶ್ರೀಮಂಗಲ, ಡಿ. 13: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ 2 ದಶಕಗÀಳಿಂದ ಕೊಡವ ಕಲೆ ಸಂಸ್ಕøತಿ ಬೆಳೆಸುವ ಉದ್ದೇಶದಿಂದ “ಕೊಡವ ಸಾಂಸ್ಕøತಿಕ ದಿನ ಮತ್ತು ಪುತ್ತರಿಕೋಲ್ ಮಂದ್ ನಮ್ಮೆ”ಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ತಾ. 22ರಂದು ಕೊಡವ ಸಾಂಸ್ಕøತಿಕ ದಿನವನ್ನು ಆಚರಿಸಲಾಗುತ್ತಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕøತಿಕ ಸಮಿತಿಯ ಸಂಚಾಲಕ ಹಾಗೂ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ ಅವರು ತಿಳಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾ. 22ರ ಭಾನುವಾರ ಪೂರ್ವಾಹ್ನ 10 ಗಂಟೆಯಿಂದ ಮಧ್ಯಾಹ್ನದವರೆಗೆ ಕೊಡವ ಸಾಂಸ್ಕøತಿಕ ಮತ್ತು ಜಾನಪದ ಕಲಾ ಪೈಪೋಟಿಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್, ಪರೆಯಕಳಿ, ಕಪ್ಪೆಯಾಟ್, ವಾಲಗತಾಟ್ ಪೈಪೋಟಿ ನಡೆಯಲಿದೆ ಎಂದು ವಿವರಿಸಿದರು.

ಪೈಪೋಟಿಯಲ್ಲಿ ಹತ್ತನೆ ತರಗತಿವರೆಗಿನ ಮಕ್ಕಳಿಗೆ ಚಿಕ್ಕವರ ವಿಭಾಗ ಹಾಗೂ ಪಿಯುಸಿ ಮೇಲ್ಪಟ್ಟ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ದೊಡ್ಡವರ ವಿಭಾಗ ಎಂದು ಎರಡು ವಿಭಾಗ ಮಾಡಲಾಗಿದೆ ಎಂದು ತಿಳಿಸಿದರು. ಪೈಪೋಟಿಯಲ್ಲಿ ಭಾಗವಹಿಸಲು ಇಚ್ಛಿಸುವವರು ತಾ. 16ರೊಳಗೆ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.

ಕೊಡವ ಸಾಂಸ್ಕøತಿಕ ದಿನ ಮತ್ತು ಪುತ್ತರಿಕೋಲ್ ಮಂದ್ ನಮ್ಮೆಯಲ್ಲಿ ಮಧ್ಯಾಹ್ನ ಸಾಂಪ್ರದಾಯಿಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಪರಾಹ್ನ 2 ಗಂಟೆಗೆ ಪುತ್ತರಿ ಪ್ರಯುಕ್ತದ ಕೋಲ್‍ಮಂದ್‍ನಲ್ಲಿ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ನಡೆಯಲಿದೆ. ತದ ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಕೊಡಂದೇರ ಬಾಂಡ್‍ಗಣಪತಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಗೌರವ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್ ಹಾಜರಿದ್ದರು.