ಸಿದ್ದಾಪುರ, ಡಿ. 13: ಜಿಲ್ಲಾ ಓ.ಡಿ.ಪಿ. ಮಹಿಳೋದಯ ಮಹಿಳಾ ಒಕ್ಕೂಟದ ವತಿಯಿಂದ ಹೆಚ್.ಐ.ವಿ. ಏಡ್ಸ್ ದಿನಾಚರಣೆಯನ್ನು ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು. ಕಿರಿಯ ಆರೋಗ್ಯ ನಿರೀಕ್ಷಕ ಸುದರ್ಶನ್ ಏಡ್ಸ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ರಾಣಿ, ಪಿ.ಡಿ.ಓ. ರಾಜೇಶ್, ಒಕ್ಕೂಟ ವಲಯ ಸಂಯೋಜಕಿ ಜಾಯ್ಸ್ ಮ್ಯಾನೆಜಸ್, ಕೇಂದ್ರ ಸಮಿತಿ ಸದಸ್ಯೆ ವಿಜಯ ನಾರಾಯಣ ಸೇರಿದಂತೆ ಇನ್ನಿತರರು ಇದ್ದರು.