ಶನಿವಾರಸಂತೆ, ಡಿ. 13: ನಿಡ್ತ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಗ್ರಾಮಸ್ಥರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬೀಟ್ ಪೊಲೀಸ್ ಅಧಿಕಾರಿ ಸಿ.ವಿ. ಪೂರ್ಣಿಮ ಮಾತನಾಡಿ, ದ್ವಿಚಕ್ರ ವಾಹನ ಚಾಲನೆ ಸಮಯದಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೀಟ್ ಸದಸ್ಯರು, ಗ್ರಾಮಸ್ಥರಾದ ಡಿ.ಎನ್. ಮಲ್ಲೇಶ್, ಷಣ್ಮುಖ, ಚನ್ನಬಸವಯ್ಯ, ಪರಮೇಶ್, ಜಯಮ್ಮ, ಭಾಗ್ಯ, ಹರಿಣಿ ಇತರರು ಉಪಸ್ಥಿತರಿದ್ದರು. ಪವಿತ್ರ ಸ್ವಾಗತಿಸಿ, ವಂದಿಸಿದರು.ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಿರಿಕೊಡ್ಲಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಠಾಣಾಧಿಕಾರಿ ಈರಪ್ಪ ವಹಿಸಿದ್ದರು. ಪೊಲೀಸ್ ಸಿಬ್ಬಂದಿ ಪ್ರದೀಪ್ ಕುಮಾರ್, ಗ್ರಾಮಸ್ಥರಾದ ಹನೀಫ್, ಮದು, ಜಯಂತ್, ಹಜೀಜ್, ಕುಟ್ಟಪ್ಪ, ಮಂಜು, ಲೋಕೇಶ್ ಇತರರು ಹಾಜರಿದ್ದರು.