ಸಿದ್ದಾಪುರ, ಡಿ. 13: ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಸೇವೆಯ ಮೂಲಕ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಧಾರ್ಮಿಕ ಪಂಡಿತರಾದ ಪಾಣಕ್ಕಾಡ್ ಸಯ್ಯದ್ ಸಾಬಿಕಲಿ ಶಿಹಾಬ್ ತಂಗಳ್ ಯುವ ಸಮೂಹಕ್ಕೆ ಕರೆ ನೀಡಿದರು.
ಎಸ್‍ಕೆಎಸ್‍ಎಸ್‍ಎಫ್ ನೆಲ್ಲಿಹುದಿ ಕೇರಿಯ ನಲ್ವತ್ತೆಕರೆ ಯೂನಿಟ್ 5ನೇ ವಾರ್ಷಿಕೋತ್ಸವದ ಅಂಗವಾಗಿ ನಲ್ವತ್ತೆಕರೆಯ ಶಂಸುಲ್ ಉಲಮಾ ನಗರದಲ್ಲಿ ಧಾರ್ಮಿಕ ಮಹಾ ಸಮ್ಮೇಳನ ವನ್ನು ಉದ್ಘಾಟಸಿ ಮಾತನಾಡಿದ ಅವರು, ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಂಡು ಕಾರ್ಯಚರಿಸುತ್ತಿರುವ ಒಂದು ವಿದ್ಯಾರ್ಥಿ ಸಂಘಟನೆಯಾಗಿದೆ ಎಂದರು. ಶೈಖುನಾ ಅಬ್ದುಲ್ಲ ಫೈಝಿ ನೇತೃತ್ವದಲ್ಲಿ ಶಂಸುಲ್ ಉಲಮಾ ಹಾಗೂ ನೇರ್ಚೆ ನೆರವೇರಿತು. ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಪ್ರಭಾಷಣ ನಿರ್ವಹಿಸಿದರು. ಈ ಸಂದರ್ಭ ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸದಸ್ಯ ಎಂ.ಎಂ ಅಬ್ದುಲ್ಲ ಫೈಝಿ, ಕೊಡಗು ನಲ್ವತ್ತೆಕರೆ ಮಸೀದಿ ಖತೀಬ್ ರಫೀಕ್ ಬಾಖವಿ, ಸಿದ್ದಾಪುರ ಖತೀಬ್ ನೌಫಲ್ ಹುದವಿ, ನಲ್ವತ್ತೆಕರೆ ಜಮಾಅತ್ ಅಧ್ಯಕ್ಷ ಬೀರಾನ್ ಕುಟ್ಟಿ ಹಾಜಿ, ಪ್ರಮುಖರಾದ ಅಬ್ದುಲ್ ರಹಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಉಸ್ತಾದ್, ಉಮ್ಮರ್ ಫೈಝಿ, ಇಕ್ಬಾಲ್ ಮೌಲವಿ, ನೌಫಲ್ ಉದವಿ, ರಫೀಕ್ ಬಾಖವಿ, ಆರಿಫ್ ಫೈಝಿ, ತಮ್ಲಿಕ್ ಧಾರಿಮಿ, ಕರೀಂ ಹಾಜಿ, ಕೆ.ಎಂ. ಬಶೀರ್ ಗ್ರಾಮ ಪಂಚಾಯಿತಿ ಸದಸ್ಯ ಸಂಶೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.