ಮಡಿಕೇರಿ, ಡಿ. 9: ತಂಡ ವೊಂದರ ಚಿಂತನೆಯ ಪ್ರತಿಫಲವಾಗಿ ಸಾಮಾಜಿಕ ಜಾಲತಾಣದಲ್ಲಿ ಜಸ್ಟ್ ಕೊಡವಾಸ್ ಎಂಬ ವಿಶೇಷ ಆ್ಯಪ್‍ವೊಂದನ್ನು ಪರಿಚಯಿಸಲಾಗುತ್ತಿದೆ. ತಾ.11ರಂದು ಹುತ್ತರಿ ಹಬ್ಬದ ಸಂದರ್ಭದಿಂದ ಇದು ಕಾರ್ಯಾರಂಭವಾಗಲಿದೆ. ಕೊಡವ ಜನಾಂಗದ ಆಗು - ಹೋಗುಗಳು, ಅಗತ್ಯತೆ ಗಳಿಗೆ ತಕ್ಕಂತೆ ಇದೇ ಪ್ರಥಮ ಬಾರಿಗೆ ಈ ರೀತಿಯ ಆ್ಯಪ್‍ನ ವ್ಯವಸ್ಥೆ ಮಾಡಲಾಗುತ್ತಿದ್ದು, ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್‍ನ ಮೂಲಕ ಜಸ್ಟ್ ಕೊಡವಾಸ್ ಎಂದು ಡೌನ್‍ಲೋಡ್ ಮಾಡಿಕೊಳ್ಳ ಬಹುದಾಗಿದೆ ಎಂದು ಈ ತಂಡದ ಪ್ರಮುಖರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈ ಆ್ಯಪ್ ಅನ್ನು ವಿಶೇಷ ರೀತಿಯಲ್ಲಿ ‘ಡಿಸೈನ್’ ಮಾಡಲಾಗಿದ್ದು, ಜನಾಂಗಕ್ಕೆ ಸಂಬಂಧಿಸಿದ ಅಗತ್ಯ ವಿವರಗಳು ಇದರಲ್ಲಿ ಲಭ್ಯವಾಗಲಿದೆ.ಏನೇನು ಇರಲಿದೆ?ಈ ಆ್ಯಪ್‍ನ ಮೂಲಕ ಜನಾಂಗದವರಿಗೆ ಅಗತ್ಯ ಸಹಾಯ ಹಸ್ತವನ್ನು ನೀಡುವ ಚಿಂತನೆಯನ್ನೂ ಮಾಡಲಾಗಿದೆ. ಅಗತ್ಯತೆ ಇರುವವರು ತಮ್ಮ ಅನಿವಾರ್ಯತೆಗಳನ್ನು ನೀಡಬಹುದು.