ಶನಿವಾರಸಂತೆ, ಡಿ. 9: ಶನಿವಾರ ಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಹಾಸನದ ಬಿ.ಎಂ. ಮಹೇಶ್ ಹಾಗೂ ಬಿ.ಎನ್. ನಾಗಣ್ಣ ಅವರುಗಳಿಗೆ ಸೇರಿದ ಜಲ್ಲಿ ತುಂಬಿದ 2 ಟಿಪ್ಪರ್ ಲಾರಿಗಳಿಗೆ (ನಂ.ಕೆಎ-13, ಸಿ-6361) (ನಂ.ಕೆಎ-13, ಸಿ-6362) ರಹದಾರಿ ಇಲ್ಲದೆ ಹಾಗೂ ಅಧಿಕ ಭಾರ ಪ್ರಯುಕ್ತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಒಟ್ಟು ರೂ.79 ಸಾವಿರ ದಂಡ ವಿಧಿಸಿದ್ದಾರೆ.ತಾ.6ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ 2 ಟಿಪ್ಪರ್ ಲಾರಿಗಳಲ್ಲಿ ರಹದಾರಿ ಇಲ್ಲದೆ ಹಾಗೂ ನಿಗದಿಗಿಂತ ಅಧಿಕ ಭಾರದ ಜಲ್ಲಿಯನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದು, ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ನಿರ್ದೇಶನ ದಂತೆ ಶನಿವಾರಸಂತೆ ಪೊಲೀಸ್ ಠಾಣಾ ಸಿಬ್ಬಂದಿಗಳು 2 ಟಿಪ್ಪರ್ ಲಾರಿಗಳನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದರು. ಗಣಿ ಮತ್ತು

(ಮೊದಲ ಪುಟದಿಂದ) ಭೂ ವಿಜ್ಞಾನ ಇಲಾಖೆ ರಹದಾರಿ ಇಲ್ಲದ ಬಗ್ಗೆ ತಲಾ ರೂ. 15 ಸಾವಿರದಂತೆ ದಂಡ ವಿಧಿಸಿದ್ದು ಹಾಗೂ ಭಾರೀ ಜಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 2 ಟಿಪ್ಪರ್ ಲಾರಿಗಳಿಗೆ (ರೂ. 25 ಸಾವಿರ, ರೂ. 24 ಸಾವಿರ) ಒಟ್ಟು ರೂ.49 ಸಾವಿರ ದಂಡ ವಿಧಿಸಿದ್ದಾರೆ. ಟಿಪ್ಪರ್ ಲಾರಿ ಮಾಲೀಕರುಗಳು ಎರಡು ಇಲಾಖೆಯವರು ವಿಧಿಸಿದ ರೂ. 79 ಸಾವಿರ ದಂಡ ಕಟ್ಟಿ ಲಾರಿಗಳನ್ನು ಬಿಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್‍ಐ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ವಿನಯ್, ಶಣ್ಮುಖ, ಬೋಪಣ್ಣ, ಶಫೀರ್ ಪಾಲ್ಗೊಂಡಿದರು.