ಗೋಣಿಕೊಪ್ಪ ವರದಿ, ಡಿ. 9 : ಇಲ್ಲಿನ ಕೀಲೇರಿ ಮುತ್ತಪ್ಪ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಹರಿಶ್ಚಂದ್ರಪುರ ಮುತ್ತಪ್ಪ ದೇವಸ್ಥಾನದಲ್ಲಿ ತಾ. 11 ರಂದು ಸಂಜೆ 6.30 ಗಂಟೆಗೆ ಹುತ್ತರಿ ವೆಳ್ಳಾಟಂ ಹಾಗೂ ಪಯ್ಯಂಗುತ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅದೇ ದಿನ ರಾತ್ರಿ 8 ಗಂಟೆಗೆ ಹುತ್ತರಿ ಕದಿರು ತೆಗೆಯುವ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಕೀಲೇರಿ ಮುತ್ತಪ್ಪ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.