ಗುಡ್ಡೆಹೊಸುರು, ಡಿ. 9: ಇಲ್ಲಿನ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಇಲ್ಲಿನ ಶಾಲಾ ಆವರಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೋಡಿ ರಾಮಮೂರ್ತಿ ವಹಿಸಿದರು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡ ಲಾಯಿತು. ಕೇಡನ ಸೋಮಣ್ಣ ಅವರ ಪುತ್ರಿ ಪ್ರಗತಿ ಮತ್ತು ಕೆಮ್ಮಾರನ ನಾಣಯ್ಯ ಅವರ ಪುತ್ರಿ ನಿಷಿತಾ ಅವರನ್ನು ಸನ್ಮಾನಿಸಲಾಯಿತು. ಬೆಟ್ಟಗೇರಿ ಅಣ್ಣಯ್ಯ ಅವರ ಪುತ್ರಿ ಕುಷಿತಾ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಗು ತ್ತಿದೆ. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪಳಂಗಾಯ ಎಲ್ಲಿಯಣ್ಣ, ಕಾರ್ಯದರ್ಶಿ ನಡುಗಲ್ಲು ಬಾಲಕೃಷ್ಣ, ಸಹ ಕಾರ್ಯದರ್ಶಿ ಗುಡ್ಡೆಮನೆ ರವಿಕುಮಾರ್, ಖಜಾಂಜಿ ಅಚ್ಚಂಡಿರಾ ತಾರಹೇಮರಾಜ್ ಮತ್ತು ನಿರ್ದೇಶಕ ರಾದ ಕುಡೆಕಲ್ಲು ಗುರುಪ್ರಸಾದ್, ಕುಡೆಕಲ್ಲು ಗಣೇಶ್, ಪುದಿಯನೆರವನ ಪದ್ಮಾವತಿ, ಬೊಮ್ಮುಡಿ ಬಾಲಕೃಷ್ಣ, ಚಂಡಿರಾ ಮಂಜುನಾಥ್, ಮತ್ತು ರೂಪನಿತ್ಯಾ ಹಾಜರಿದ್ದರು, ಸಲಹಾ ಸಮಿತಿ ಸದಸ್ಯರಾದ ಬಿರುಮಣ್ಣನ ಸಣ್ಣಯ್ಯ, ಕನ್ನಯ್ಯನ ಬಾಲಕೃಷ್ಣ, ಗುಡ್ಡೆಮನೆ ಮಣಿಕುಮಾರ್, ಅಚ್ಚಂಡಿರಾ ಹೇಮರಾಜ್ ಹಾಜರಿದ್ದರು.

ಈ ಸಂದÀರ್ಭ ಅಧ್ಯಕ್ಷ ಕೋಡಿ ರಾಮಮೂರ್ತಿ ಮಾತನಾಡಿ ಕೊಡಗಿನ ಇತಿಹಾಸದಲ್ಲಿ ಗೌಡ ಜನಾಂಗದ ಪಾತ್ರದ ಬಗ್ಗೆ ವಿವರಿಸಿದರು. ಅಲ್ಲದೆ ಅರೆಭಾಷೆ ಜನಾಂಗದ ಆಚಾರ, ಭಾಷೆ, ಸಂರ್ಪದಾಯ, ಪದ್ಧತಿ ಬಗ್ಗೆ ಮಾತನಾಡಿದರು ತಮ್ಮ ಭಾಷೆಯಬಗ್ಗೆ ಅಭಿಮಾನವಿಟ್ಟು ಅನ್ಯ ಭಾಷೆಯನ್ನು ಗೌರವಿಸಿ ಅರೆಭಾಷೆಯನ್ನು ಉಳಿಸು ವಂತೆ ಮತ್ತು ತಮ್ಮ ಭಾಷೆಗಳಿಗೆ ಗೌರವ ಕೊಟ್ಟು ಅನ್ಯಭಾಷೆಯ ಮೇಲೆ ಅಭಿಮಾನವಿರುವಂತೆ ಸಮಾಜ ರೂಪಿಸಬೇಕೆಂದು ತಿಳಿಸಿದರು. ಈ ಸಂದರ್ಭ ಗುಡ್ಡೆಮನೆ ಮಣಿಕುಮಾರ್ ಮಾತನಾಡಿ ಗೌಡಜನಾಂಗದ ಪರಂಪರೆಯ ಬಗ್ಗೆ ತಿಳಿಸಿದರು. ರವಿಕುಮಾರ್ ಸರ್ವರನ್ನು ಸ್ವಾಗತಿಸಿ ದರು, ರೂಪನಿತ್ಯಾ ವಂದಿಸಿದರು. ಕುಡೆಕ್ಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.