ನಾಪೋಕ್ಲು, ಡಿ. 9 :ಉತ್ತಮ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಜೀವನ ನಿಷ್ಪ್ರಯೋಜಕ ಎಂದು ನಬಾರ್ಡ್‍ನ ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ಮುಂಡಂಡ ಸಿ. ನಾಣಯ್ಯ ಹೇಳಿದರು. ನಾಪೋಕ್ಲುವಿನ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಇಲ್ಲಿನ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಉತ್ತಮ ನಡೆನುಡಿ, ಶ್ರದ್ಧೆ ವಿಧೇಯತೆ ಮುಂತಾದ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 10ನೇ ತರಗತಿಯಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯವನ್ನು ನೀಡುವದಾಗಿ ಹಾಗೂ ಮುಂದಿನ ವರ್ಷದ ಕ್ರೀಡೋತ್ಸವದ ಎಲ್ಲಾ ಬಹುಮಾನಗಳನ್ನು ಪ್ರಾಯೋಜಿಸುವ ದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರು ನಿವೃತ್ತ ವಿಜ್ಞಾನಿಯೂ ಆದ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಅರೆಯಡ ಸೋಮಪ್ಪ, ಬಿದ್ದಟಂಡ ಪಾಪ ಮುದ್ದಯ್ಯ, ನಿವೃತ್ತ ಡಿ ವೈ ಎಸ್ ಪಿ ಬೊಪ್ಪಂಡ ಕುಶಾಲಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಂಬಂಡ ಗಣೇಶ್, ನಿವೃತ್ತ ಪ್ರಾಂಶುಪಾಲ ಕಲಿಯಾಟಂಡ ಪೂಣಚ್ಚ, ನೆರವಂಡ ಸುನಿಲ್, ನಾಯಕಂಡ ದೀಪು ಚಂಗಪ್ಪ, ಪ್ರಾಂಶುಪಾಲರಾದ ಕಲಿಯಾಟಂಡ ಶಾರದಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಯಾನಾ ದೇಚಮ್ಮ ಪ್ರಾರ್ಥಿಸಿ, ಪ್ರಾಂಶುಪಾಲೆ ಶಾರದಾ ಸ್ವಾಗತಿಸಿದರು. ಶಿಕ್ಷಕಿ ಕವಿತಾ ಅತಿಥಿಗಳ ಪರಿಚಯ ಮಾಡಿ ಶಿಕ್ಷಕ ಅಂಬ್ರಾಟಿ ಭಗವತಿ ಪ್ರಸಾದ್ ನಿರೂಪಿಸಿದರು. ಶಿಕ್ಷಕ ಮೂಡೇರ ಕಾಳಯ್ಯ ತೀರ್ಪುಗಾರರಾಗಿ ಭಾಗವಹಿಸಿದರು.ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಮುಖ್ಯ ಅತಿಥಿ ಮುಂಡಂಡ ಸಿ.ನಾಣಯ್ಯ ಧ್ವಜಾರೋಹಣ ಗೈದ ಬಳಿಕ ವಿದ್ಯಾರ್ಥಿಗಳಿಂದ ಸಾಮೂಹಿಕ ಪಥಸಂಚಲನ, ಕರಾಟೆ, ಅಂಗಸಾಧನೆ ಹಾಗೂ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಬಳಿಕ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿ ಶುಭಕೋರಿದರು.

ನಾಪೋಕ್ಲು : ರಾಮಟ್ರಸ್ಟ್ ವಾರ್ಷಿಕೋತ್ಸವ