ಮಡಿಕೇರಿ, ಡಿ.9: ವೀರಾಜಪೇಟೆ 66/11 ಕೆ.ವಿ. ಹಾಗೂ ಮೂರ್ನಾಡು 33/11 ಕೆ.ವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಫೀಡರ್‍ಗಳಲ್ಲಿ ವಿದ್ಯುತ್ ಜಾಲದ ಸಮಗ್ರ ಅಭಿವೃದ್ಧಿ ಯೋಜನೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆ ತಾ. 10 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು.

ವೀರಾಜಪೇಟೆ ಪಟ್ಟಣ, ಕುಕ್ಲೂರು, ಕದನೂರು, ಬೆಳ್ಳಾರಿಮಾಡು, ಕಾಕೋಟುಪರಂಬು, ಮೈತಾಡಿ, ಚಾಮಿಯಾಲ, ನಾಲ್ಕೇರಿ ಅರಮೇರಿ, ಬೆಳ್ಳುಮಾಡು, ಕಡಂಗ ಕೆದಮುಳ್ಳೂರು, ಪಾಲಂಗಾಲ, ಬೇಟೋಳಿ, ಬಾರಿಕಾಡು ವಿ.ಬಾಡಗ, ಪಾರಣೆ, ಮೂರ್ನಾಡು, ನಾಪೋಕ್ಲು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.