ಸುಂಟಿಕೊಪ್ಪ, ಡಿ.8: ವಿದ್ಯಾರ್ಥಿಗಳು ಸಂಸ್ಕಾರವನ್ನು ಮೈಗೂಡಿಸಿಕೊಂಡು ವಿದ್ಯೆಯನ್ನು ಕಲಿತು ಸತ್ಪ್ರಜೆಗಳಾಗಿ ಮುಂದೆ ಬರಬೇಕು ಎಂದು ನಿವೃತ್ತ ಕರ್ನಲ್ ಬಿಜಿವಿ ಕುಮಾರ್ ಹೇಳಿದರು.
ಮಾದಾಪುರ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ 58ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚೆನ್ನಮ್ಮ ಕಾಲೇಜು ವಿದ್ಯಾರ್ಥಿಗಳ ಸಾಧನೆ ಮೇಲ್ಮಟ್ಟಕ್ಕೆ ನಿಂತಿದೆ. ಅದು ಕೆಳಗೆ ಇಳಿಯಬಾರದು, ಶಿಸ್ತು ಪ್ರಾಮಾಣಿಕತೆ ವಿದ್ಯಾರ್ಥಿಗಳಲ್ಲಿ ಅತೀ ಮುಖ್ಯ. ಸಂಸ್ಕಾರದೊಂದಿಗೆ ಸಭಾ ನಡವಳಿಕೆ ಯನ್ನು ಮೈಗೂಡಿಸಿ ಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳ ಬೇಕು ಶಾಲೆಗೆ ಪೋಷಕರಿಗೆ ಉತ್ತಮ ಹೆಸರು ತಂದುಕೊಡಬೇಕು ಎಂದರು. ಮುಖ್ಯ ಅತಿಥಿಯಾದ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಜಿ. ಬೋಪಣ್ಣ, ವಿದ್ಯಾರ್ಥಿಗಳು ಮನಸ್ಸಿಟ್ಟು ಶ್ರದ್ಧೆಯಿಂದ ಓದಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಲು ಈಗಿನಿಂದಲೇ ಪ್ರಯತ್ನ ಆರಂಭಿಸಬೇಕು ಎಂದರು.
ನಿವೃತ್ತ ಡಿಸಿಪಿ ಬಿ.ಎ.ಪೂಣಚ್ಚ ಮಾತನಾಡಿ, 5 ಗಂಟೆಗೆ ಎದ್ದು ವ್ಯಾಸಂಗ ಮಾಡುವ ಪರಿಪಾಠ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕ್ರೀಡೆ ಸಾಂಸ್ಕøತಿಕ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಮಂದಪ್ಪ ಆಡಳಿತ ಮಂಡಳಿ ನಿರ್ದೇಶಕರುಗಳಾದ ಸೀತಾ ಚೆಟ್ಟಿಯಡ್ರ, ಪಿಎನ್. ಮೋಹನ್, ಎಂ.ವಿ. ಜಾನಕ್ಕಿ, ಬೋಜಮ್ಮ ಹಾಗೂ ಎನ್‍ಸಿಸಿ ಅಧಿಕಾರಿ ಕೃಷ್ಣ ತಫಾ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ರೇವತಿ ಸ್ವಾಗತಿಸಿ, ವಿದ್ಯಾರ್ಥಿನಿ ಸಿ.ಬಿ.ನಿಸರ್ಗ ಹಾಗೂ ಮೇರಿಸಿಂದಿಯಾ ನಿರೂಪಿಸಿ, ಉಪನ್ಯಾಸಕ ಮೋಹನ ಹೆಗಡೆ ವಂದಿಸಿದರು.