ಗುಡ್ಡೆಹೊಸೂರು, ಡಿ. 8: ಇಲ್ಲಿನ ಗ್ರಾ.ಪಂ. ಗ್ರಾಮಸಭೆ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಸತಿ ಶಾಲೆಯ ವಿದ್ಯಾರ್ಥಿನಿ ಶ್ರದ್ಧಾ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳಾದ ಪುನಿತ್, ಬಿಂದು, ಕೌಶಿಕ್, ಭ್ರೀಜೇಶ್ ಹಾಜರಿದ್ದರು. ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಮತ್ತು ಸದಸ್ಯರಾದ ಪುಷ್ಪ, ಡಾಟಿ, ಪ್ರಸನ್ನ, ಜಿ.ಟಿ. ರವಿ, ನಾರಾಯಣ ಹಾಜರಿದ್ದರು. ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದು, ತಮ್ಮ ಶಾಲೆಯಲ್ಲಿ ಇರುವ ಮೂಲಭೂತ ಸೌಕರ್ಯಗಳ ಮತ್ತು ಶೌಚಾಲಯ, ಕುಡಿಯುವ ನೀರು ಮತ್ತು ಶುಚಿತ್ವದ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.
ಗುಡ್ಡೆಹೊಸೂರು ಶಾಲೆಯ ಮಂಭಾಗ ರಾಜ್ಯ ಹೆದ್ದಾರಿಯಲ್ಲಿ ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ರಸ್ತೆ ದಾಟುವ ಸಂದರ್ಭ ವಾಹನಗಳಿಂದ ತುಂಬಾ ತೊಂದರೆಯಾಗುತ್ತಿದ್ದು, ಪೊಲೀಸ್ ಇಲಾಖೆಯಿಂದ ಶಾಲಾ ಮುಂಭಾಗ ಬ್ಯಾರಿಕ್ಯಾಡ್ ಅಳವಡಿಸುವಂತೆ ಗಮನಕ್ಕೆ ತರಲಾಯಿತು. ಸಭೆಯಲ್ಲಿ ಹಾಜರಿದ್ದ ಇಲಾಖಾ ಸಿಬ್ಬಂದಿ ಸತ್ಯ ಅಧಿಕಾರಿಗಳ ಗಮನಕ್ಕೆ ಬ್ಯಾರಿಕ್ಯಾಡ್ ಅಳವಡಿಸುವ ಬಗ್ಗೆ ತಿಳಿಸಲಾಗುವದೆಂದು ತಿಳಿಸಿದರು. ವಿವಿಧ ಶಾಲೆಯ ಹಲವು ಸಮಸ್ಯೆಗಳ ಬಗ್ಗೆ ಮಕ್ಕಳು ತಿಳಿದ ಸಂದÀರ್ಭ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವದಾಗಿ ಪಿ.ಡಿ.ಓ. ಶ್ಯಾಂ ಮತ್ತು ಅಧ್ಯಕ್ಷೆ ಭಾರತಿ ಭರವಸೆ ನೀಡಿದರು.
ಈ ಸಂದರ್ಭ ಪಂಚಾಯಿತಿ ಕಾರ್ಯದರ್ಶಿ ನಂಜುಂಡೇಸ್ವಾಮಿ, ವಿವಿಧ ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು.