ಶನಿವಾರಸಂತೆ, ಡಿ. 8: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಕಚೇರಿಯಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಚಿಕ್ಕ ಹಳ್ಳಿಯಾದ ಮುಳ್ಳೂರು ಗ್ರಾಮದ ನಿವಾಸಿ ಎಂ.ಆರ್. ದೇವಪ್ಪ ಅನೇಕ ವರ್ಷಗಳ ಕಾಲ ಕಾನೂನು ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ಸರಕಾರದ ಎಕ್ಸ್ ಅಫಿಸಿಯೋ ಸೆಕ್ರೇಟರಿ ಇನ್‍ಲಾಸ್ ಎಂಬ ಅತ್ಯುನ್ನತ ಅಧಿಕಾರಿಗಳಾಗಿ ನಿಯುಕ್ತರಾದರು. ಆನಂತರ ಡೈರೆಕ್ಟರ್ ಆಫ್ ಪ್ರಾಸಿಕ್ಯೂಶನ್ ಮತ್ತು ರಾಜ್ಯದ ಸ್ಟೇಟ್ ಲಿಟಿಗೇಶನ್ ಇಲಾಖೆಯ ಅಧಿಕಾರ ಹೊಂದಿ ನಿವೃತ್ತರಾದ ನಂತರ ಕೊಡಗು ಮತ್ತು ಹಾಸನದಲ್ಲಿ ಗ್ರಾಹಕರ ವೇದಿಕೆಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಕಚೇರಿಯಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷ ಎನ್.ಬಿ. ನಾಗಪ್ಪ ಮಾತನಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್. ನಿರಂಜನ್, ಸನ್ಮಾನಿತರಾದ ಮುಳ್ಳೂರು ದೇವಪ್ಪ ಅವರು ಮಾತನಾಡಿ, ವಕೀಲಿ ವೃತ್ತಿ ಹಣ ಮಾಡುವದಕ್ಕೊಸ್ಕರವಲ್ಲ. ಸತ್ಯಕ್ಕೆ ಆದ್ಯತೆ ಕೊಟ್ಟು ನಂಬಿ ಬಂದಂತಹ ಕಕ್ಷಿದಾರರ ಹಿತ ಕಾಪಾಡುವದು ಮುಖ್ಯ ಎಂದರು.

ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಜಿ. ನಾರಾಯಣಸ್ವಾಮಿ ಮಾತನಾಡಿದರು. ಸಮಾರಂಭದಲ್ಲಿ ಕ್ಲಬ್ ಉಪಾಧ್ಯಕ್ಷರುಗಳಾದ ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಎಂ.ಆರ್. ಮಲ್ಲೇಶ್ ಧ್ವಜ ವಂದನೆ ನೆರವೇರಿಸಿದರು. ಖಜಾಂಚಿ ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಕಾರ್ಯದರ್ಶಿ ಎಂ.ಆರ್. ನಿರಂಜನ್ ವಂದಿಸಿದರು.