ಶನಿವಾರಸಂತೆ, ಡಿ. 9: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ವಾಹನ ಚಾಲಕರ, ಸಂಘ-ಸಂಸ್ಥೆಗಳ ಸಭೆಯನ್ನು ಕರೆಯಲಾಗಿ, ಸಭೆಯ ಅಧ್ಯಕ್ಷತೆಯನ್ನು ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ವಹಿಸಿ ಮಾತನಾಡಿದರು.
ಠಾಣಾ ಹೆಡ್ ಕಾನ್ಸ್‍ಟೇಬಲ್ ಬೋಪಣ್ಣ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಅಕ್ಮಲ್ ಪಾಶಾ, ಶಿವಶಂಕರ್, ಮಂಜುನಾಥ್, ಸಾಗರ್, ಯಶ್ವಂತ, ಮುಜಾಯಿತ್ ಪಾಶ ಅವರುಗಳು ಮಾತನಾಡಿ, ನಗರದ ಬೀದಿಯಲ್ಲಿ ಅತೀ ವೇಗವಾಗಿ ಬೈಕ್ ಓಡಿಸುವವರು ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಿಬ್ಬಂದಿಗಳಾದ ಪರಮೇಶ್, ಶಫೀರ್, ವಿವೇಕ್, ಸೋನಿ, ಪೂರ್ಣಿಮ ಉಪಸ್ಥಿತರಿದ್ದು, ಶಶಿ ಸ್ವಾಗತಿಸಿ, ಸವಿತಾ ನಿರೂಪಿಸಿ, ರಾಧ ವಂದಿಸಿದರು.