ವೀರಾಜಪೇಟೆ, ಡಿ. 8: ವೀರಾಜಪೇಟೆಯ ಆರ್ಜಿ ಗ್ರಾಮದ ಕೊಡವ ಕಲ್ಚರಲ್ ಅಂಡ್ ಸ್ಪೋಟ್ರ್ಸ್ ಅಸೋಶಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹಾರಿಸಿ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಉದ್ಘಾಟಿಸಿದರು.
ಅತಿಥಿಯಾಗಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಗ್ರಾಮದ ಹಿರಿಯರಾದ ಕೀತಿಯಂಡ ಸುಬ್ಬಯ್ಯ, ಕರ್ತಚ್ಚಿರ ನಾಣಯ್ಯ, ಚಂದಪಂಡ ರಾಜ ನಂಜಪ್ಪ, ಕಬ್ಬಚ್ಚಿರ ಜೋಯಪ್ಪ ಉಪಸ್ಥಿತರಿದ್ದರು. ಅಸೋಶಿಯೇಶನ್ ಅಧ್ಯಕ್ಷರಾದ ಪಾಡೆಯಂಡ ಕೆ.ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಆರ್ಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಸಮಾರಂಭದ ಪ್ರಾರಂಭದಲ್ಲಿ ರತು ಕಾವೇರಮ್ಮ ಸ್ವಾಗತಿಸಿದರು. ಕಬ್ಬಚ್ಚಿರ ಶರತ್ ನಿರೂಪಿಸಿದರು.
ಸಮಾರೋಪ
ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ನೆಲಜಿ ಗ್ರಾಮದ ಚೀಯಕ ಪೂವಂಡ ಚೇತನ್ ಪ್ರಥಮ ಸ್ಥಾನ ಗಳಿಸಿ ರೂ 10,000 ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿ ಕೊಂಡರು. ಹೆಗ್ಗಳ ಗ್ರಾಮದ ಅಚ್ಚಪಂಡ ಪಟ್ಟು ಅವರು ಎರಡನೇ ಸ್ಥಾನ ಗಳಿಸಿ ರೂ. 7000 ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನಗಳಿಸಿದ ಆರ್ಜಿ ಗ್ರಾಮದ ಕಬ್ಬಚ್ಚಿರ ಶರತ್ ಅವರು ರೂ. 5000 ನಗದು ಹಾಗೂ ಟ್ರೋಫಿಯನ್ನು ಪಡೆದರು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಸೇರಿದಂತೆ ಒಟ್ಟು 150 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಟ್ಟಡ ಪೂವಣ್ಣ, ಕೀತಿಯಂಡ ಸುಬ್ಬಯ್ಯ, ಕಬ್ಬಚ್ಚಿರ ಜೋಯಪ್ಪ, ಕರ್ತಚಿರ ರತು ಕಾವೇರಮ್ಮ, ಕರ್ತಚಿರ ಕಾವೇರಪ್ಪ ಹಾಗೂ ಅಸೋಶಿಯೇಶನ್ ಅಧ್ಯಕ್ಷ ಪಾಡೆಯಂಡ ಕೆ.ಕಾರ್ಯಪ್ಪ ಉಪಸ್ಥಿತರಿದ್ದು; ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.