ವೀರಾಜಪೇಟೆ, ಡಿ. 8: ವಿವಿಧÀ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕರಿಗೆ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೋಣಿಕೊಪ್ಪಲು ರಸ್ತೆಯಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ವಕ್ಫ್ ಬೋರ್ಡ್‍ಗೆ ಉಪಾಧ್ಯಕ್ಷ ಬಾಪು ಅಬ್ದುಲ್ ರೆಹಮಾನ್ ಮತ್ತು ವೀರಾಜಪೇಟೆ ಕಾಂಗ್ರೆಸ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ರಫೀಕ್ ಕೆ.ಎಸ್ ಅವರುಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧÀ್ಯಕ್ಷ ಪಿ.ಎ. ಹನೀಫ, ಗೌರವಾಧ್ಯಕ್ಷ ಪಿ.ಎ. ಕರೀಂ, ಪ್ರಧಾನ ಕಾರ್ಯದÀರ್ಶಿ ಎಂ.ಎಂ. ಇಸ್ಮಾಯಿಲ್ ಹಾಗೂ ನಿರ್ದೇಶಕರುಗಳಾದ ಆಲಿ, ಎಂ.ವೈ. ಸೂಫಿ, ಕೆ.ಎಸ್. ಮುಸ್ತಫಾ ಇತರರು ಹಾಜರಿದ್ದರು.