ಕುಶಾಲನಗರ, ಡಿ. 8: ಕುಶಾಲನಗರ ಗೌಡ ಸಮಾಜ ಆಶ್ರಯದಲ್ಲಿ ತಾ. 11 ರಂದು ಗೌಡ ಸಮಾಜದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುವದು ಎಂದು ಸಮಾಜದ ಅಧ್ಯಕ್ಷ ಕೂರನ ಪ್ರಸನ್ನ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗೌಡ ಸಮಾಜ ನೇತೃತ್ವದಲ್ಲಿ ಗೌಡ ಯುವಕ ಸಂಘ, ಗೌಡ ಮಹಿಳಾ ಸಂಘ, ಗೌಡ ಸಾಂಸ್ಕøತಿಕ ವೇದಿಕೆ, ಗೌಡ ಮಾಜಿ ಸೈನಿಕರ ಸಂಘ ಸಂಯುಕ್ತಾಶ್ರಯದಲ್ಲಿ ನಡೆಯುವ ಹುತ್ತರಿ ಹಬ್ಬದ ಅಂಗವಾಗಿ ಸಂಜೆ 6.30 ಕ್ಕೆ ಗೌಡ ಸಮಾಜದಲ್ಲಿ ಸೇರಿ ಫಲಹಾರ ನಂತರ 7.35 ಕ್ಕೆ ನೆರೆ ಕಟ್ಟುವದು ನಂತರ ಕುಶಾಲನಗರ ಗಣಪತಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸಿ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ಕದಿರು ತೆಗೆದು ನಂತರ ಸಮಾಜಕ್ಕೆ ಹಿಂತಿರುಗಿ ಕದಿರು ವಿತರಣೆ ನಡೆಸಲಾಗುವದು ಎಂದು ತಿಳಿಸಿದರು.

ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ ಅವರು ಮಾತನಾಡಿ, ಸಮಾಜದಿಂದ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಹುತ್ತರಿ ಹಬ್ಬ ಆಚರಣೆಯಾಗುತ್ತಿದ್ದು ಕದಿರು ತೆಗೆದ ನಂತರ ಸಮುದಾಯ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಕದಿರು ವಿತರಣೆ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು. ಗೋಷ್ಠಿಯಲ್ಲಿ ಗೌಡ ಮಹಿಳಾ ಸಂಘದ ಪಟ್ಟಂದಿ ಬೀನಾ ಸೀತಾರಾಂ, ಸಂಘದ ನಿರ್ದೇಶಕರಾದ ಸುಳ್ಯೆಕೋಡಿ ಮಾದಪ್ಪ ಇದ್ದರು.