ಗೋಣಿಕೊಪ್ಪ ವರದಿ, ಡಿ. 7: ಮಲೇಷಿಯಾದ ಕುಚಿಂಗ್ ಸಾರ್ವಕ್ನಲ್ಲಿ ಆಯೋಜಿಸಿದ್ದ 21ನೇ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಕೊಡಗಿನ ಮೂವರು ಕ್ರೀಡಾಪಟುಗಳು ಭಾಗವಹಿಸಿ ಚಿನ್ನ ಸೇರಿದಂತೆ ಏಳು ಪದಕ ಗೆದ್ದಿದ್ದಾರೆ.
ಹಿರಿಯ ಅಂತರ್ರಾಷ್ಟ್ರೀಯ ಓಟಗಾರ ಪೆಮ್ಮಂಡ ಅಪ್ಪಯ್ಯ, ಮುಲ್ಲೇರ ಪೊನ್ನಮ್ಮ ಪೂವಣ್ಣ ಹಾಗೂ ಬೊಪ್ಪಂಡ ಕುಸುಮಾ ಭೀಮಯ್ಯ ಪಾಲ್ಗೊಂಡು ಪದಕ ಗಿಟ್ಟಿಸಿಕೊಂಡರು.
35 ವಯೋಮಿತಿಯ ವಿಭಾಗದಲ್ಲಿ ಬೊಪ್ಪಂಡ ಕುಸುಮಾ ಭೀಮಯ್ಯ ಚಿನ್ನ ಸೇರಿದಂತೆ 3 ಪದಕ ಗೆದ್ದರು. 4ಘಿ1400 ರಿಲೇಯಲ್ಲಿ ಚಿನ್ನ, 400 ಮೀಟರ್ ಓಟದಲ್ಲಿ ಬೆಳ್ಳಿ, 800 ಮೀ. ಓಟದಲ್ಲಿ ಕಂಚು ಗೆದ್ದಿದ್ದಾರೆ.
65 ವಯೋಮಿತಿಯ ವಿಭಾಗದಲ್ಲಿ ಮುಲ್ಲೇರ ಪೊನ್ನಮ್ಮ ಪೂವಣ್ಣ 200 ಮೀಟರ್ ಓಟ, ಭಾರದ ಗುಂಡು ಎಸೆತ ಹಾಗೂ 4ಘಿ1100 ರಿಲೇಯಲ್ಲಿ ಕಂಚಿನ ಪದಕದ ಮೂಲಕ 3 ಪದಕ ಗೆದ್ದುಕೊಂಡರು.
75 ವಯೋಮಿತಿಯ ವಿಭಾಗದಲ್ಲಿ ಭಾಗವಹಿಸಿದ್ದ ಪೆಮ್ಮಂಡ ಅಪ್ಪಯ್ಯ 4ಘಿ1100 ಮೀ. ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಡಿಸೆಂಬರ್ 2 ರಿಂದ 7 ರವರೆಗೆ ಕ್ರೀಡಾಕೂಟ ನಡೆದಿತ್ತು.