ಗೋಣಿಕೊಪ್ಪ ವರದಿ, ಡಿ. 7: ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮಾಯಮುಡಿ ಶಾಖೆ ವತಿಯಿಂದ ಮಾಯಮುಡಿಯಲ್ಲಿ ಪಥಸಂಚಲನ ಮತ್ತು ಶಾಖಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು.

ಕೋಣನಕಟ್ಟೆಯಿಂದ ಮಾಯಮುಡಿ ರಾಮಮಂದಿರದವರೆಗೆ ಪಥಸಂಚಲನ ನಡೆಯಿತು. ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು. ತೆರೆದ ವಾಹನದಲ್ಲಿ ಆರ್‍ಎಸ್‍ಎಸ್ ಹಿರಿಯರ ಭಾವಚಿತ್ರ ಇಟ್ಟು ಮೆರವಣಿಗೆ ನಡೆಸಲಾಯಿತು.

ನಂತರ ಆರ್‍ಎಸ್‍ಎಸ್ ಜಿಲ್ಲಾ ಪ್ರಮುಖ್ ಚೆಕ್ಕೇರ ಮನು ಕಾವೇರಪ್ಪ, ಕಾರ್ಯಕರ್ತ ಚೆರಿಯಪಂಡ ರವಿ ಬೌಧಿಕ್ ನಡೆಸಿಕೊಟ್ಟರು. ಈ ಸಂದರ್ಭ ಮಾಯಮುಡಿ ಶಾಖೆ ಪ್ರಮುಖ್ ವೇಣು, ಸೇವಾ ಪ್ರಮುಖ್ ಸಣ್ಣುವಂಡ ರಮೇಶ್, ಬೌಧಿಕ್ ಪ್ರಮುಖ್ ಆಪಟ್ಟೀರ ಬೋಪಣ್ಣ, ವ್ಯವಸ್ತಾಪಕ್ ಪ್ರಮುಖ್ ಚೆಪ್ಪುಡೀರ ಪ್ರದೀಪ್ ಪೂವಯ್ಯ ಇದ್ದರು.