ಗುಡ್ಡೆಹೊಸೂರು, ಡಿ.6: ಇಲ್ಲಿನ ಶ್ರೀ ಚೌಡೇಶ್ವರಿ ಮತ್ತು ಶ್ರೀಬಸವೇಶ್ವರ ದೇವಸ್ಥಾನದ ವತಿಯಿಂದ ಸಾರ್ವತ್ರಿಕ ಹುತ್ತರಿ ಆಚರಣೆ ನಡೆಸಲಾಗುವದು. ಇಲ್ಲಿನ ನಿವಾಸಿ ಮುದ್ದಪ್ಪ ಅವರ ಗದ್ದೆಯಲ್ಲಿ ಕದಿರು ತೆಗೆಯುವ ಕಾರ್ಯಕ್ರಮವಿದ್ದು. ತಾ.11ರ ರಾತ್ರಿ 7.50ಕ್ಕೆ ನೆರೆ ಕಟ್ಟಿ, 8.25ಕ್ಕೆ ಕದಿರು ತೆಗೆದು ಮೆರವಣಿಗೆ ಮೂಲಕ ಸಾಗಿ ಇಲ್ಲಿನ ಶ್ರೀ ಚಾಮುಂಡೆಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ನಂತರ ಸಾರ್ವಜನಿಕರಿಗೆ ವಿತರಿಸಲಾಗುವದು.