ಗೋಣಿಕೊಪ್ಪಲು, ಡಿ. 6: ಮನೆಯಪಂಡ ಎನ್.ಕರುಂಬಯ್ಯ( ಜಾಕಿ ಮಾಸ್ಟರ್) ಸ್ಮರಣಾರ್ಥ ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ನೇತೃತ್ವದಲ್ಲಿ ಪೆÇನ್ನಂಪೇಟೆ ಆಸ್ಟ್ರೋ ಟರ್ಫ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ‘ದಿ ಮಾಸ್ಟರ್ಸ್ ಕಪ್’ ಹಾಕಿ ಫೈನಲ್ಸ್‍ನಲ್ಲಿ ಆತಿಥೇಯ ಕಾಲ್ಸ್ ಶಾಲೆ ಹಾಗೂ ಅರುವತ್ತೊಕ್ಕಲು ವಿದ್ಯಾನಿಕೇತನ ಶಾಲೆ ಮುಖಾಮುಖಿಯಾಗಲಿವೆ.

ಇಂದು ಅಪರಾಹ್ನ ನಡೆದ ಮೊದಲ ಸೆಮಿಫೈನಲ್‍ನಲ್ಲಿ ಕಾಲ್ಸ್ ಶಾಲಾ ತಂಡವು ಕೂರ್ಗ್ ಪಬ್ಲಿಕ್ ಶಾಲಾ ತಂಡವನ್ನು 6-1 ಗೋಲುಗಳಿಂದ ಸೋಲಿಸಿ ಪ್ರಥಮವಾಗಿ ಫೈನಲ್ ಪ್ರವೇಶಿಸಿತು. ಕಾಲ್ಸ್ ತಂಡದ ಪರ 12 ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ಪ್ರತೀಕ್ ಗೋಲು ಗಳಿಸಿದರೆ, 17 ಹಾಗೂ 19 ನೇ ನಿಮಿಷ ಕುಶಾಲಪ್ಪ ಎರಡು ಫೀಲ್ಡ್ ಗೋಲು, ತಶ್ವಿನ್ 18ನೇ ನಿಮಿಷ ಆಕರ್ಷಕ ಫೀಲ್ಡ್ ಗೋಲು ಮತ್ತು 42 ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಅಂತರವನ್ನು 5-1 ಕ್ಕೇರಿಸಿದರು. ಪಂದ್ಯಾಟದ 40ನೇ ನಿಮಿಷ ಕಾಪ್ಸ್ ತಂಡದ ದೇಶ್‍ಬೋಪಯ್ಯ ಮಾತ್ರ ಏಕೈಕ ಫೀಲ್ಡ್ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಾಲ್ಸ್‍ನ ಶ್ರವಣ್ ಪೆನಾಲ್ಟಿ ಕಾರ್ನರ್ ಮೂಲಕ 6 ನೇ ಗೋಲು ಹೊಡೆಯುವ ಮೂಲಕ ಕಾಲ್ಸ್ ಶಾಲೆ 6-1 ಗೋಲುಗಳ ಅಂತರದಲ್ಲಿ ಗೆಲ್ಲಲು ನೆರವಾದರು.

ಇಂದು ಜರುಗಿದ ದ್ವಿತೀಯ ಸೆಮಿಫೈನಲ್ ನಲ್ಲಿ ಅರುವತ್ತೊಕ್ಕಲು ವಿದ್ಯಾನಿಕೇತನ ತಂಡವು ಪೆÇನ್ನಂಪೇಟೆ ಹಳ್ಳಿಗಟ್ಟು ಸಿಐಟಿ ಪಿ.ಯು.ಕಾಲೇಜು ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ವಿದ್ಯಾನಿಕೇತನ ತಂಡದ ಪರ ಪ್ರಧಾನ್(38ನೇ ನಿಮಿಷ) ಫೀಲ್ಡ್ ಗೋಲು ಹಾಗೂ 44 ನೇ ನಿಮಿಷ ಪ್ರತೀಕ್ ಗೋಲು ಹೊಡೆದು 2-0 ಮುನ್ನಡೆ ಒದಗಿಸಿದರು. ಪಂದ್ಯಾಟದ 56ನೇ ನಿಮಿಷ ಸಿಐಟಿ ತಂಡದ ಯಶಸ್ಸ್ ಎಕೈಕ ಗೋಲು ಹೊಡೆದು ಅಂತರವನ್ನು ತಗ್ಗಿಸಿದರು.

ಈ ಬಾರಿಯ ಮಾಸ್ಟರ್ಸ್ ಕಪ್‍ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯ ತಾ.7 ರಂದು ಮಧ್ಯಾಹ್ನ 2.30 ಗಂಟೆಗೆ ಕಾಲ್ಸ್ ಮತ್ತು ವಿದ್ಯಾನಿಕೇತನ ತಂಡಗಳ ನಡುವೆ ಜರುಗಲಿದ್ದು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಮುಖ್ಯಸ್ಥ ಡಾ.ಜಿ.ಕಿಶೋರ್ ಫೈನಲ್ಸ್ ಉದ್ಘಾಟಿಸಲಿದ್ದಾರೆ ಎಂದು ಆಶ್ವಿನಿ ನಾಚಪ್ಪ ತಿಳಿಸಿದ್ದಾರೆ.

ಕಾಪ್ಸ್ ಆಟಗಾರನ ಹಲ್ಲು ಮುರಿತ

ಆಟದ 39 ನೇ ನಿಮಿಷ ಕಾಲ್ಸ್ ಆಟಗಾರ ಗೋಲು ಬಾರಿಸುವ ಧಾವಂತದಲ್ಲಿ ಬೀಸಿದ ಹಾಕಿ ಸ್ಟಿಕ್ ಕಾಪ್ಸ್ ಮುನ್ನಡೆ ಆಟಗಾರ ಭವನ್ ಬೋಪಣ್ಣನ ದವಡೆಗೆ ಬಡಿದ ಪರಿಣಾಮ ಎರಡು ಹಲ್ಲು ಮುರಿಯಿತಲ್ಲದೆ, ಶೀಘ್ರದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ದಂತ ವೈದ್ಯರಲ್ಲಿಗೆ ಕಳುಹಿಸಲಾಯಿತು.

ವಿಜೇತರಿಗೆ ರೂ.30 ಸಾವಿರ ನಗದು

ಫೈನಲ್ ವಿಜೇತರಿಗೆ ರೂ.30 ಸಾವಿರ ನಗದು, ಪರ್ಯಾಯ ಪಾರಿತೋಷಕ ಮತ್ತು ವಿನ್ನರ್ಸ್ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.20 ಸಾವಿರ ನಗದು ಮತ್ತು ಟ್ರೋಫಿ, ಅತ್ಯುತ್ತಮ ಗೋಲಿ, ಅತ್ಯುತ್ತಮ ಡಿಫೆಂಡರ್, ಅತ್ಯುತ್ತಮ ಮುನ್ನಡೆ ಆಟಗಾರ, ಅತ್ಯುತ್ತಮ ಮಿಡ್ ಫೀಲ್ಡರ್ ಆಟಗಾರನಿಗೆ ತಲಾ ರೂ.3 ಸಾವಿರ ನಗದು ಮತ್ತು ವೈಯಕ್ತಿಕ ಪಾರಿತೋಷಕ ನೀಡಲಿರುವದಾಗಿ ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ ತಿಳಿಸಿದ್ದಾರೆ.

- ಟಿ.ಎಲ್.ಶ್ರೀನಿವಾಸ್