ಮಡಿಕೇರಿ, ಡಿ. 6 : ಆಯುರ್ವೇದ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ಬೇಡಿಕೆ ಹೆಚ್ಚಾಗಿದ್ದು, ಇದರ ಉಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿ ನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಶಿಬಿರದಲ್ಲಿ ಪಾಲ್ಗೊಂಡು ಶಾಸಕರು ಮಾತನಾಡಿದರು.

ವಾರದಲ್ಲಿ ಎರಡು ದಿನವಾದರೂ ಆಯುರ್ವೇದ ಚಿಕಿತ್ಸೆ ಪಡೆಯುವದು ಅತ್ಯಗತ್ಯ. ಇದರಿಂದ ದೇಹದಾಡ್ರ್ಯತೆ ಮತ್ತು ರಕ್ತ ಪರಿಚಲನೆಗೆ ಅನುಕೂಲ ವಾಗಲಿದೆ. ಆಯುರ್ವೇ ದದಲ್ಲಿ ಯಾವದೇ ರೀತಿಯ ಅಡ್ಡ ಪರಿಣಾಮ ಇರುವದಿಲ್ಲ. ಆಯುರ್ವೇದ ಚಿಕಿತ್ಸೆ ಪಡೆದು ಆರೋಗ್ಯಯುತ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಆರೋಗ್ಯಯುತ ದೇಹದ ಸದೃಢತೆಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆಯಿರಿ. ಆಯುರ್ವೇದ ಔಷಧಿಗಳಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ, ಪ್ರತಿಯೊಬ್ಬರೂ ಆಯುರ್ವೇದ ಔಷಧಿ ಪದ್ಧತಿಯನ್ನು ಪಡೆಯುವಂತಾಗಬೇಕು. ಗಿಡಮೂಲಿಕೆ ಗಳಿಂದ ತಯಾರಿಸಿದ ಔಷಧಿಗಳನ್ನು ಸೇವಿಸುವದರಿಂದ ಯಾವದೇ ರೀತಿಯ ತೊಂದರೆಗಳು ಬರುವದಿಲ್ಲ ಎಂದು ಹೇಳಿದರು.

ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಆರೋಗ್ಯ ಬೇಕು. ವ್ಯಾಯಾಮ ಮಾಡುವದರಿಂದ ದೇಹವನ್ನು ಶ್ರಮಿಸುವಂತಾಗುತ್ತದೆ. ದೇಹ ಶ್ರಮಿಸಿದಷ್ಟು ಆರೋಗ್ಯ ಯುತವಾಗಿರಬಹುದು. ಆಯುರ್ವೇದ ಪಂಚಕರ್ಮ ಚಿಕಿತ್ಸೆಯಿಂದ ದೇಹದ ರಕ್ತದ ಒತ್ತಡವನ್ನು ಸಡಿಲಗೊಳಿಸುತ್ತದೆ;

ಪಂಚಕರ್ಮ ಚಿಕಿತ್ಸೆಗೆ ಖಾಸಗಿ ಯಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದರೆ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಬಹುದು. ಇದರಿಂದ ಹೆಚ್ಚು ಜನರು ಪಂಚಕರ್ಮ ಚಿಕಿತ್ಸೆ ಪಡೆಯಿರಿ ಎಂದು ಶಾಸಕರು ಹೇಳಿದರು.

ಆಯುರ್ವೇದ ಔಷಧಿಯ ಗುಣಗಳ, ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಶಾಸಕರು ಹೇಳಿದರು.

ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ ಪ್ರತಿನಿತ್ಯ ದೊರೆಯುವ ಮೆಣಸು, ಲವಂಗ, ಶುಂಠಿ, ಅರಿಸಿನ, ಈರುಳ್ಳಿ, ಬೆಳ್ಳುಳ್ಳಿ ಮತ್ತಿತರವನ್ನು ಬಳಸಿ ಮನೆಯಲ್ಲಿಯೇ ಔಷಧಿ ತಯಾರಿಸಿ ಉಪಯೋಗಿಸು ವದರಿಂದ ಹೆಚ್ಚಿನ ಆಯುಷ್ಯ ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಬಿ.ಎಚ್. ರಾಮಚಂದ್ರ ಮಾತನಾಡಿ ಬಹಳ ಪುರಾತನ ಕಾಲದ ಹೋಮಿಯೋಪತಿ ಔಷಧಿ ಜನರಿಗೆ ತಲಪಲಿ ಎಂಬ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಆಯುರ್ವೇದ ಔಷಧಿ ಪದ್ಧತಿಯು ಪೂರ್ವಜರಿಂದ ಬಂದಿದ್ದು, ಸರ್ವ ರೋಗಗಳಿಗೆ ಆಯುರ್ವೇದದಲ್ಲಿ ಔಷಧಿಗಳಿವೆ. ಪೂರ್ವಜರ ಔಷಧಿ, ಆಹಾರ ಪದ್ಧತಿ, ದಿನನಿತ್ಯದ ಪಂಚ ಕರ್ಮಗಳನ್ನು ಹಾಗೂ ಪ್ರಕೃತಿಯಲ್ಲಿ ಕೂಡ ಒಂದು ಸಮತೋಲನವನ್ನು ಉಂಟು ಮಾಡುತ್ತದೆ ಎಂದು ತಿಳಿಸಿದರು.

ಪೂರ್ವಜರು ಬಳಸುತ್ತಿದ್ದ ಔಷಧ ಕ್ರಮಗಳನ್ನು ಬಳಸಬೇಕು. ಮನೆಯಲ್ಲಿ ಇರುವಂತಹ ಶುಂಠಿ, ಅರಿಶಿನ, ಸಂಬಾರ, ಲವಂಗ ಮುಂತಾದವು ಗಳನ್ನು ಬಳಸಿಕೊಂಡು ತಯಾರಿಸಿ ಔಷಧಿಗಳು ಶೀತ, ಕಫ, ಕೆಮ್ಮು ರೋಗಗಳನ್ನು ನಿವಾರಿಸು ತ್ತಿದ್ದವು. ಪ್ರಾಚೀನ ಕಾಲದಲ್ಲಿ ಅಭಿವೃದ್ಧಿ ಪಡಿಸಿದ ಕೆಲವೇ ಕೆಲವು ಔಷಧದ ವ್ಯವಸ್ಥೆಗಳಲ್ಲಿ ಆಯುರ್ವೇದವು ಒಂದಾಗಿದೆ. ಸಂಸ್ಕøತಿಯಲ್ಲಿ ಒಂದಾದ ಹೋಮಿಯೋಪತಿ ಪದ್ಧತಿಯನ್ನು ಪ್ರತಿಯೊಬ್ಬರೂ ಅನುಸರಿಸಿ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಈಶ್ವರಿ ನಿರೂಪಿಸಿದರು. ಡಾ.ಸ್ಮೀತ ಸ್ವಾಗತಿಸಿದರು. ಡಾ.ಶುಭ ವಂದಿಸಿ ದರು. ಶಾಸಕ ಅಪ್ಪಚ್ಚು ರಂಜನ್ ಅವರು ಸರ್ಕಾರಿ ಆಯುಷ್ ಆಸ್ಪತ್ರೆಯ ಕಾಮಗಾರಿಯನ್ನು ಪರಿಶೀಲಿಸಿ, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಾಹಿಸು ತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ಯವರ ಮಾಹಿತಿ ಪಡೆದರು.