ಮಡಿಕೇರಿ, ಡಿ. 6: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಉಡುಪಿಯಲ್ಲಿ ನಡೆದ ಪದವಿಪೂರ್ವ ವಿಭಾಗದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.

ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ತಂಡ ಪ್ರಥಮ ಸ್ಥಾನ ಗಳಿಸಿದರೆ, ಕೊಡಗು ಜಿಲ್ಲಾ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಕೊಡಗು ತಂಡದ ಪರವಾಗಿ ಆಡಿದ ಕೂಡಿಗೆ ಪ.ಪೂ. ಕಾಲೇಜಿನ ಅನಂತ್, ಪ್ರಶಾಂತ್, ಸಂಜಯ್ ಹಾಗೂ ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಪ್ರತೀಕ್ ಪೊನ್ನಣ್ಣ ಅವರುಗಳು ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಟೆರೆಶಿಯನ್ ಕಾಲೇಜು ತಂಡÀ 2-0 ಗೋಲುಗಳಿಂದ ಪ್ರಥಮ ಸ್ಥಾನ ಗಳಿಸಿದ್ದು, ಸಾಯಿ ಆಟಗಾರ್ತಿಯರನ್ನೊಳಗೊಂಡ ಮಡಿಕೇರಿ ಸರಕಾರಿ ಪ.ಪೂ. ಕಾಲೇಜು ತಂಡÀ ದ್ವಿತೀಯ ಸ್ಥಾನ ಗಳಿಸಿದೆ. ತಂಡದಲ್ಲಿ ಪಿ.ಟಿ. ಶಿಲ್ಪ, ಕೆ.ಕೆ. ಗೌತಮಿ, ಬಿ.ಎ. ಶಯ, ಬಿ.ಕೆ. ಲೀಲಾವತಿ, ಪಿ.ಎನ್. ಅರ್ಪಿತ, ಹೆಚ್.ಪಿ, ಸಿಂಚನ, ಬಿ.ಎಸ್. ಚಂದನ, ಹೆಚ್.ಜಿ. ಧನುಶ್ರೀ, ಹೆಚ್.ಎ. ಅಪ್ಸರ, ಪಿ.ಯು. ರಮ್ಯ, ಸಿ.ಬಿ. ರಶ್ಮಿ, ಕೆ.ಆರ್. ಭೂಮಿಕಾ, ಆರಿಫಾ ಪಾಲ್ಗೊಂಡಿದ್ದರು.

ಈ ಪೈಕಿ ಶಿಲ್ಪ, ಶಯ, ಲೀಲಾವತಿ, ಅರ್ಪಿತಾ, ಅಪ್ಸರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದ ತರಬೇತುದಾರರಾಗಿ ಹೆಚ್.ಎಸ್. ಚಿದಾನಂದ, ವ್ಯವಸ್ಥಾಪಕಿ ಯಾಗಿ ಸಂಧ್ಯಾ ತೆರಳಿದ್ದರು.

ಮೈಸೂರು ತಂಡದ ಪರ ಕೊಡಗಿನವರಾದ ಎಸ್. ಆದಿರ, ಹೆಚ್.ಎಸ್. ಜಾಹ್ನವಿ, ಕುಡೆಕಲ್ ಸುರಕ್ಷಾ, ತಡಿಯಪ್ಪನ ಸುಚಿತಾ, ಕೆ.ಜಿ. ಲೇಖನ ಪಾಲ್ಗೊಂಡಿದ್ದರು. ತರಬೇತುದಾರರಾಗಿ ದೈಹಿಕ ಶಿಕ್ಷಕ ಅಂತೋಣಿ ಮೋರಾಸ್ ಕಾರ್ಯನಿರ್ವಹಿಸಿದರು.