ಕುಶಾಲನಗರ, ಡಿ. 6: ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಗಣಪತಿ ಅವರು ತಿಳಿಸಿದ್ದಾರೆ.
ದೇವಾಲಯ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳ ಹಿಂದೆ ನಿರ್ಮಾಣವಾದ ದೇವಾಲಯದ ಗೋಪುರ ಶಿಥಿಲಗೊಂಡಿದ್ದು ಪುನರ್ ನವೀಕರಣ ಮಾಡುವ ಕಾರ್ಯದ ಹಿನ್ನಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ನಡೆದಿದೆ. ಆ ಪ್ರಕಾರವಾಗಿ ದೇವಾಲಯದ ಗೋಪುರ ಜೀರ್ಣೋದ್ಧಾರ ಕಾರ್ಯಕ್ಕೆ ಸುಮಾರು ರೂ.50 ಲಕ್ಷ ವೆಚ್ಚ ತಗುಲಲಿದೆ ಎಂದು ಮಾಹಿತಿ ಒದಗಿಸಿದರು.
ದಾನಿಗಳ ಸಹಕಾರದೊಂದಿಗೆ ಸಧ್ಯದಲ್ಲಿಯೇ ಈ ಬಗ್ಗೆ ಕಾರ್ಯ ಯೋಜನೆ ರೂಪಿಸಲಾಗುವದು. ಎಲ್ಲರೂ ಸಹಕಾರ ನೀಡುವಂತೆ ಅವರು ಕೋರಿದರು.
ಇದೇ ಸಂದರ್ಭ ಅಯ್ಯಪ್ಪ ಮಂಡಲ ಪೂಜೆ ತಾ.16 ರಂದು ನಡೆಯಲಿದ್ದು ಪೂರ್ವಸಿದ್ದತೆ ಬಗ್ಗೆ ಚರ್ಚೆ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಹೇಶ್ ನಾಲ್ವಡೆ ಅವರು ಮಂಡಿಸಿದರು. ಲೆಕ್ಕಪತ್ರವನ್ನು ಅಧ್ಯಕ್ಷರಾದ ಗಣಪತಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ದೇವಾಲಯ ಸಮಿತಿ ಟ್ರಸ್ಟಿಗಳು, ಪದಾಧಿಕಾರಿಗಳು, ಸದಸ್ಯರು ಇದ್ದರು.