ಸೋಮವಾರಪೇಟೆ, ಡಿ.6: ಅನೇಕ ವರ್ಷಗಳಿಂದ ಸಾರ್ವಜನಿಕ ಕುಡಿಯುವ ನೀರಿನ ಕಂದಾಯ ಹಾಗೂ ಮನೆ ಕಂದಾಯ ಪಾವತಿಸದೆ ಇರುವ ಬಳಕೆದಾರರ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿದೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇತರ ಯಾವದೇ ಆದಾಯದ ಮೂಲಗಳಿಲ್ಲದಿರುವದರಿಂದ ನೀರು ಹಾಗೂ ಮನೆ ಕಂದಾಯವನ್ನು ಕಳೆದ ಸಾಲಿನಿಂದ ಹಿಂದಕ್ಕೆ ಬಾಕಿ ಉಳಿಸಿಕೊಂಡಿರುವ ಬಳಕೆದಾರರ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.