ವೀರಾಜಪೇಟೆ, ಡಿ.6: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಕೊಡವ ಕಲ್ಚರಲ್ ಅಂಡ್ ಸ್ಪೋಟ್ರ್ಸ್ ಅಸೋಶಿಯೇಶನ್ ವತಿಯಿಂದ ತಾ:8ರಂದು ರಾಜ್ಯ ಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಸೋಶಿಯೇಶನಿನ ಅಧ್ಯಕ್ಷ ಪಾಡೆಯಂಡ ಕೆ.ಕಾರ್ಯಪ್ಪ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾರ್ಯಪ್ಪ ಅವರು ಅಂದು ಬೆಳಿಗ್ಗೆ 10ಗಂಟೆಗೆ ಆರ್ಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ಪರ್ಧೆ ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಕೀತಿಯಂಡ ಸುಬ್ಬಯ್ಯ, ಕರ್ತಚಿರ ನಾಣಯ್ಯ, ಚಂದಪಂಡ ರಾಜಾ ನಂಜಪ್ಪ, ಕಬ್ಬಚ್ಚಿರ ಜೋಯಪ್ಪ, ಕೊಪ್ಪಿರ ಕರುಂಬಯ್ಯ ಉಪಸ್ಥಿತಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್ ಭಾಗವಹಿಸಲಿದ್ದು ಪಿ.ಕೆ.ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ಮೋ: 9886399751 ಹಾಗೂ 9880472728 ನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಕೆ.ಕೆ.ಬೋಪಣ್ಣ, ಕಬ್ಬಚ್ಚಿರ ಶರತ್, ಕೀತಿಯಂಡ ಪ್ರತಾಪ್, ಕೀತಿಯಂಡ ಮಂಜು ಅಯ್ಯಪ್ಪ, ಕೊಪ್ಪಿರ ಕಿಶನ್, ಕೀತಿಯಂಡ ಬೋಪಣ್ಣ ಚಂದಪಂಡ ಮಾಚಯ್ಯ ಹಾಗೂ ಚಂದಪಂಡ ದೇವಯ್ಯ ಉಪಸ್ಥಿತರಿದ್ದರು.